ಕನ್ನಡ ವಾರ್ತೆಗಳು

ಈಜಲು ತೆರಳಿದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತ್ಯು

Pinterest LinkedIn Tumblr

swimming_boy_death

ಪುತ್ತೂರು, ಏ.27: ಖಾಸಗಿ ಈಜುಕೊಳದಲ್ಲಿ ಬಾಲಕಿನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರಂತ ಘಟನೆ ನಗರದ ದರ್ಬೆಯಲ್ಲಿ ನಿನ್ನೆ ಸಂಭವಿಸಿದೆ.

ಮರ್ದಾಳದ ಗಂಗಾಧರ್ ಗೌಡ ಎನ್ನುವವರ ಪುತ್ರ ದೇವಿಪ್ರಸಾದ್ ಯಾನೆ ಯಕ್ಷಿತ್ (11) ಮೃತ ಬಾಲಕನಾಗಿದ್ದು, ಐದನೇ ತರಗತಿಯ ವಿದ್ಯಾರ್ಥಿಯಾಗಿದ್ದ. ನಿನ್ನೆ ಈತ ನಗರದ ಪುರುಷರಕಟ್ಟೆಯಲ್ಲಿರುವ ಸಂಬಂಧಿ ಬಾಲಕೃಷ್ಣರ ಮನೆಯಲ್ಲಿ ನಡೆದ ಸಮಾರಂಭಕ್ಕೆ ಬಂದಿದ್ದ. ಸಂಜೆ ಸಂಬಂಧಿಕರೊಂದಿಗೆ ದರ್ಬೆ ಬೈಪಾಸ್ ಬಳಿಯಿರುವ ಎ ಎಸ್ ಆರ್ ಈಜುಕೊಳಕ್ಕೆ ತೆರಳಿದ್ದ. ಈಜು ಗೊತ್ತಿಲ್ಲದಿದ್ದರೂ ಕೊಳಕ್ಕಿಳಿದಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment