ಮನೋರಂಜನೆ

ರಿಯೋ ಒಲಿಂಪಿಕ್ಸ್ ರಾಯಭಾರಿಯಾಗಿ ಸಲ್ಮಾನ್ ಬದಲಿಗೆ ಬಿಂದ್ರಾ ಆಯ್ಕೆ ಸೂಕ್ತ: ಗಂಭೀರ್

Pinterest LinkedIn Tumblr

Gautam-Salman

ಮುಂಬೈ: ರಿಯೋ ಒಲಿಂಪಿಕ್ಸ್ ರಾಯಭಾರಿಯಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಆಯ್ಕೆಯನ್ನು ಗೌತಮ್ ಗಂಭೀರ್ ತೀವ್ರವಾಗಿ ವಿರೋಧಿಸಿದ್ದಾರೆ.

ಸಲ್ಮಾನ್ ಖಾನ್ ಆಯ್ಕೆ ಕುರಿತಂತೆ ಅಥ್ಲೆಟಿಕ್ ದಿಗ್ಗಜ ಮಿಲ್ಕಾ ಸಿಂಗ್ ಹಾಗೂ ಕುಸ್ತಿಪಟು ಯೋಗೇಶ್ವರ್ ದತ್ ಬಳಿಕ ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ವಿರೋಧಿಸಿದ್ದು, ಸಲ್ಮಾನ್ ಖಾನ್ ಬದಲಿಗೆ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಶೂಟರ್ ಅಭಿನವ್ ಬಿಂದ್ರಾರನ್ನು ಆಯ್ಕೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.

ಭಾರತದಲ್ಲಿ ಕ್ರೀಡಾಪಟುಗಳಿಗೆ ಬರವಿಲ್ಲ. ಒಲಿಂಪಿಕ್ಸ್ ಸೇರಿದಂತೆ ವಿಶ್ವದ ಕ್ರೀಡಾಕೂಟದಲ್ಲಿ ಸಾಕಷ್ಟು ಸಾಧನೆ ಮಾಡಿದ ಅಥ್ಲೀಟ್‌ಗಳು ನಮ್ಮಲ್ಲಿದ್ದಾರೆ. ಅಭಿನವ್ ಬಿಂದ್ರಾರಂಥ ಸಾಧಕರನ್ನು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಸದ್ಭಾವನಾ ರಾಯಭಾರಿಯನ್ನಾಗಿ ನೇಮಕ ಮಾಡಬೇಕಿತ್ತು ಎಂದು ಗೌತಮ್ ಹೇಳಿದ್ದಾರೆ.

Write A Comment