ರಾಷ್ಟ್ರೀಯ

ಹುಡುಗಿ ಜತೆ ಪರಾರಿಯಾದ ಹುಡುಗನ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪೋಷಕರು

Pinterest LinkedIn Tumblr

ra

ಲಖನೌ: ತಮ್ಮ ಹುಡುಗಿಯನ್ನು ಹಾರಿಸಿಕೊಂಡು ಹೋದ ಎಂಬ ಕಾರಣಕ್ಕೆ ಹುಡುಗಿ ಪೋಷಕರು ಹುಡುಗನ ತಾಯಿಯನ್ನು ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಲಖೀಮ್ ಪುರ ಖೇರಿಯಲ್ಲಿ ನಡೆದಿದೆ.

60 ವರ್ಷದ ಮಹಿಳೆ ಮಗ ಹುಡುಗಿಯೊಂದಿಗೆ ಓಡಿ ಹೋದನೆಂದು ಕುಪಿತಗೊಂಡ ಹುಡುಗಿ ಕುಟುಂಬ ಸದಸ್ಯರು ಆಕೆಯ ಮುಖಕ್ಕೆ ಮಸಿ ಬಳಿದು ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಖಾರದ ಪುಡಿ ಎರಚಿ ಅಮಾನುಷವಾಗಿ ಶಿಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ಕುಟುಂಬಗಳು ಒಂದೇ ಗ್ರಾಮದವರಾಗಿದ್ದು, ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿದ ಸುದ್ದಿ ತಿಳಿದ ಆಕೆಯ ಪತಿಯು ತನ್ನ ಬೆಂಬಲಿಗ ಗ್ರಾಮಸ್ಥರೊಂದಿಗೆ ಸ್ಥಳಕ್ಕೆ ಬಂದು ಪತ್ನಿಯನ್ನು ರಕ್ಷಿಸಿ ಬಳಿಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಈ ಸಂಬಂಧ ನಾಲ್ವರು ಮಹಿಳೆಯರ ಸಹಿತ ಒಟ್ಟು ಐವರ ವಿರುದ್ಧ ಪೊಲೀಸರು ಎಫ್ಐಆರ್‌ ದಾಖಲಿಸಿದ್ದಾರೆ. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಖೇರಿ ಎಸ್‌ಪಿ ಅಖೀಲೇಶ್‌ ಚೌರಾಶಿಯಾ ತಿಳಿಸಿದ್ದಾರೆ.

Write A Comment