ಮನೋರಂಜನೆ

ಪತ್ರಕರ್ತೆ ಕೇಳಿದ ಪ್ರಶ್ನೆಗೆ ವಿರಾಟ್ ಕೊಹ್ಲಿ ಸಿಟ್ಟಾದದ್ದು ಏಕೆ…? ಅನುಷ್ಕಾ ಶರ್ಮ ಬಗ್ಗೆ ಕೊಹ್ಲಿ ಏನು ಫಾರ್ಮಾನು ಹೊರಡಿಸಿದರು….! ಇಲ್ಲಿದೆ ಓದಿ…

Pinterest LinkedIn Tumblr

Virat Kohli  And  Anushka Sharma

ನವದೆಹಲಿ: ಕೆಲ ದಿನಗಳ ಬ್ರೇಕ್ ಅಪ್ ನಂತರ ಮತ್ತೆ ಅನುಷ್ಕಾ ಶರ್ಮ ಜತೆ ಒಂದಾಗಿರುವ ನಡುವೆ ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ, ಮತ್ತೊಮ್ಮೆ ಆಕೆಯ ಪರ ಬ್ಯಾಟಿಂಗ್ ಮಾಡಿದ್ದಾರೆ.

ಮುಂಬೈಯಲ್ಲಿ ‘ವಿರಾಟ್ಸ್ ಫ್ಯಾನ್ ಬಾಕ್ಸ್’ ಆಪ್ ಬಿಡುಗಡೆಯ ವೇಳೆ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ ಅಸಮಾಧಾನದಿಂದಲೇ ಪ್ರತಿಕ್ರಿಯಿಸಿದ ವಿರಾಟ್, ಅನುಷ್ಕಾ ಶರ್ಮ ಬಗ್ಗೆ ನನ್ನ ಬಳಿ ಕೇಳುವ ಹಕ್ಕು ಯಾರೊಬ್ಬರಿಗೂ ಇಲ್ಲ’ ಎಂದು ಮತ್ತೊಮ್ಮೆ ಕಿಡಿಕಾರಿದ್ದಾರೆ. ಈ ಬಗ್ಗೆ ಯಾರೂ ತಿಳಿದುಕೊಳ್ಳಬೇಕಾದ ಅಗತ್ಯವಿಲ್ಲ. ಈ ಬಗ್ಗೆ ಉತ್ತರಿಸುವ ಗೋಜಿಗೂ ಹೋಗುವುದಿಲ್ಲ ಎಂದಿದ್ದಾರೆ.

ಬಳಿಕ ಪತ್ರಕರ್ತೆಗೆ ಮರು ಪ್ರಶ್ನೆ ಮಾಡಿದ ವಿರಾಟ್, ನಿಮ್ಮ ವೈಯಕ್ತಿಕ ಜೀವನ ಹೇಗಿದೆ ಎಂದು ಹೇಳುತ್ತೀರಾ ಎನ್ನುವ ಮೂಲಕ ತಮ್ಮ ಅಸಮಾಧಾನ ತೋರಿಸಿದ್ದಾರೆ. ಫ್ಯಾನ್​ ಬಾಕ್ಸ್ ಆಪ್ ಮೂಲಕ ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಅಭಿಮಾನಿಗಳು ನನ್ನೊಂದಿಗೆ ಕೇಳಬಹುದು. ಹಾಗಂತ ನನ್ನ ಜೀವನದ ಪ್ರತಿಯೊಂದು ವಿಚಾರಗಳನ್ನು ಹೇಳುತ್ತೇನೆ ಎಂಬ ಅರ್ಥವಲ್ಲ ಎಂದು ಹೇಳಿದರು.

Write A Comment