ಮನೋರಂಜನೆ

ರವೀಂದ್ರ ಜಡೇಜಾ ವಿವಾಹ ಮೆರವಣಿಗೆ ವೇಳೆ ಫೈರಿಂಗ್: ಎಫ್ ಐಆರ್ ದಾಖಲು

Pinterest LinkedIn Tumblr

ravindra-jadeja-firing

ರಾಜ್ ಕೋಟ್: ವಿವಾಹ ಮೆರವಣಿಗೆ ವೇಳೆ ಫೈರಿಂಗ್ ಮಾಡಿದ್ದ ಪ್ರಕರಣಕ್ಕೆ ಸಂಬಂಪಟ್ಟಂತೆ ರವೀಂದ್ರ ಜಡೇಜಾ ಅವರ ಸಂಬಂಧಿಯೋರ್ವರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.

ಪ್ರಸಕ್ತ ಐಪಿಎಲ್ ನಲ್ಲಿ ಗುಜರಾತ್ ಲಯನ್ಸ್ ತಂಡದಲ್ಲಿ ಆಡುತ್ತಿರುವ ರವೀಂದ್ರ ಜಡೇಜಾ ಅವರ ವಿವಾಹ ಏಪ್ರಿಲ್ 17 ರಂದು ರೀವಾ ಸೋಲಂಕಿ ಜೊತೆ ನಡೆದಿತ್ತು. ಈ ವೇಳೆ ಮೆರವಣಿಗೆ ಸ್ಥಳದಲ್ಲಿ ರವೀಂದ್ರಾ ಜಡೇಜಾ ಸಂಬಂಧಿಕರೊಬ್ಬರು ಪಿಸ್ತೂಲಿನಿಂದ ಆರು ಸುತ್ತು ಗುಂಡು ಹಾರಿಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿವಾಹದ ವೇಳೆ ಚಿತ್ರೀಕರಿಸಿದ್ದ ಎಲ್ಲಾ ವಿಡಿಯೋಗಳನ್ನು ಪರೀಕ್ಷೆ ಮಾಡಿದಾಗ ಅದರಲ್ಲಿ ರವೀಂದ್ರ ಜಡೇಜಾ ಸಂಬಂಧಿ ಕೃಪಾಲ್ ಸಿನ್ಹಾ ಜಡೇಜಾ ಎಂಬುವರು ತಮ್ಮ ಪಿಸ್ತೂಲಿನಿಂದ ಗುಂಡು ಹಾರಿಸಿರುವುದು ಕಂಡು ಬಂದಿದೆ. ಹೀಗಾಗಿ ಅವರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದ್ದು, ಪಿಸ್ತೂಲಿಗೆ ಲೈಸೆನ್ಸ್ ಇದೆಯೇ ಅಥವಾ ಪರವಾನಗಿ ಅವಧಿ ಮುಗಿದಿದೆಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಲೋಧಿಕಾ ತೆಹ್ಸೀಲ್ ಠಾಣಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Write A Comment