
ಮಂಗಳೂರು,ಎ.26 : ಕರಾವಳಿಯ ತಟ ರಕ್ಷಣೆಗಾಗಿ ಗೋವಾದ ಶಿಪ್ಯಾರ್ಡ್ನಲ್ಲಿ ನಿರ್ಮಾಣವಾದ ಐಸಿಜಿಎಸ್ ಶೂರ್ನೌಕೆ ನವಮಂಗಳೂರು ಬಂದರಿನಲ್ಲಿರುವ ಕೋಸ್ಟ್ಗಾರ್ಡ್ ಬೇಸ್ಗೆ ಅಗಮಿಸಿದೆ.


ಸುಮಾರು 105 ಮೀ. ಉದ್ದವಿರುವ ಮಧ್ಯಮ ಗಾತ್ರದ ನೌಕೆಯಾಗಿದ್ದು, ಒಂದು ಹೆಲಿಕಾಪ್ಟರನ್ನು ಹೊತ್ತೂಯ್ಯಬಲ್ಲ ಸಾಮರ್ಥ್ಯ ಹೊಂದಿದ್ದು, ಆತ್ಯಾಧುನಿಕ ಸಂಪರ್ಕ ಸೌಲಭ್ಯ, ಕಣ್ಗಾವಲು ವ್ಯವಸ್ಥೆಯ ಪರಿಕರ, ಸಮುದ್ರ ಮಾಲಿನ್ಯ ತಪಾಸಣೆ, ಮೀನುಗಾರರ ರಕ್ಷಣೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಇದು ಹೊಂದಿದೆ.
ಇದರ ಕಾರ್ಯ ವೈಖರಿಗಳು:
1.ಸ್ಥಳೀಯ ಮೀನುಗಾರರ ಮೂಲಕ ಮಾಹಿತಿ ಸಂಗ್ರಹಮಾದುವುದು,
2.ದಿನದ 24 ಗಂಟೆ ಅಪರಿಚಿತ / ಅನುಮಾನಾಸ್ಪದ ಹಡಗುಗಳ ಮೇಲೆ ಕಣ್ಗಾವಲು,
3.ಸಮುದ್ರ ಮಾಲಿನ್ಯವಾಗದಂತೆ ತಪಾಸಣೆ ಕಾರ್ಯಗಳನ್ನು ಈ ಹಡಗು ನಡೆಸುತ್ತದೆ.