ಕನ್ನಡ ವಾರ್ತೆಗಳು

  ಲಾಟರಿ ಮುಕ್ತ ವಲಯ: ಶ್ರೀಘ್ರದಲ್ಲೇ ಜಿಲ್ಲೆಯಲ್ಲೂ ಪ್ಲೈಯಿಂಗ್ ಸ್ಕಾಡ್ ರಚನೆ

Pinterest LinkedIn Tumblr

Lottary

ಮ೦ಗಳೂರು, ಏ.26: ಕರ್ನಾಟಕ ರಾಜ್ಯವನ್ನು ಎ.01 ರಿಂದ ಲಾಟರಿ ಮುಕ್ತವಲಯವನ್ನಾಗಿ ಘೋಷಿಸಲಾಗಿದೆ. ಅದರೂ ನೆರೆರಾಜ್ಯ ಮತ್ತು ಹೊರರಾಜ್ಯಗಳ ಲಾಟರಿ ಮಾರಾಟವನ್ನು ತಡೆಗಟ್ಟಲು ಸರ್ಕಾರವು ಆದೇಶ ಸಂಖ್ಯೆಅನ್ವಯ ಬೆಂಗಳೂರು ಜಿಲ್ಲೆಯ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್‌ನ್ನು ಪುನರ್ ರಚಿಸಿದ್ದು,

ಇದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಸಭೆಯನ್ನು ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್‌ನಲ್ಲಿ ಜರಗಿಸಲಾಗಿದೆ.

ಈ ಫ್ಲೈಯಿಂಗ್ ಸ್ಕ್ವಾಡ್‌ಗೆ ಜಿಲ್ಲಾಧಿಕಾರಿಯವರು ಅಧ್ಯಕ್ಷರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸದಸ್ಯರು, ಇನ್‌ಚಾರ್ಚ್ ಜಾರಿಗೊಳಿಕೆ ವಿಭಾಗದ ವಾಣಿಜ್ಯತೆರಿಗೆ ಅಧಿಕಾರಿಗಳು ಸದಸ್ಯರು, ಸಹಾಯಕ ನಿರ್ದೇಶಕರು, ಪಿಂಚಣಿ ಸಣ್ಣ ಉಳಿತಾಯ ಆಸ್ತಿ-ಋಣ ನಿರ್ವಹಣೆ ಇಲಾಖೆ ಇವರು ಸದಸ್ಯ ಸಮಾವೇಶಕರಾಗಿರುತ್ತಾರೆ.

ಜಿಲ್ಲೆಯಲ್ಲಿ ಯಾವುದೇ ತರಹದ ಲಾಟರಿ ದಂಧೆ/ಅನಧಿಕೃತ ಲಾಟರಿ ವಹಿವಾಟು ನೆರೆರಾಜ್ಯ/ ಹೊರರಾಜ್ಯಗಳ ಲಾಟರಿ ಟಿಕೇಟುಗಳ ಮಾರಾಟದ ನಿಯಂತ್ರಣ ಹಾಗೂ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಎಫ್.ಐ.ಆರ್ ದಾಖಲಿಸುವುದು. ಫ್ಲೈಯಿಂಗ್ ಸ್ಕ್ವಾಡ್‌ನ ಆದ್ಯ ಕರ್ತವ್ಯವಾಗಿರುತ್ತದೆ. ಒಂದು ವೇಳೆ ಜಿಲ್ಲೆಯ ಯಾವುದೇ ಭಾಗದಲ್ಲಿ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಅಂತಹವರ ವಿರುದ್ಧ ಫ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದೆಂದು ಫ್ಲೈಯಿಂಗ್ ಸ್ಕ್ವಾಡ್ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಕ್ಷಿಣ ಕನ್ನಡ ಮಂಗಳೂರುರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸುತ್ತಾರೆ.

ಜನಸಾಮಾನ್ಯರು ಕೂಡಾ ಲಾಟರಿ ದಂಧೆ ಹಾವಳಿಯನ್ನು ತಪ್ಪಿಸುವಲ್ಲಿ ಫ್ಲೈಯಿಂಗ್ ಸ್ಕ್ವಾಡ್‌ನೊಂದಿಗೆ ಸಹಕರಿಸಲು ಕೋರಿದೆ.

Write A Comment