ಮನೋರಂಜನೆ

ಮಾಜಿ ಪ್ರಿಯಕರನ ಜೊತೆಗೆ ಕೆಲಸ ಮಾಡದಿರುವುದು ಪ್ರಾಚೀನ ಕಲ್ಪನೆ: ಕರೀನಾ

Pinterest LinkedIn Tumblr

shahid-kareena

ನವದೆಹಲಿ: ಅಭಿಷೇಕ್ ಚೌಬೆ ಅವರ ‘ಉಡ್ತಾ ಪಂಜಾಬ್’ ಸಿನೆಮಾದಲ್ಲಿ ತಮ್ಮ ಮಾಜಿ ಬಾಯ್ ಫ್ರೆಂಡ್ ಶಾಹಿದ್ ಕಪೂರ್ ಜೊತೆಗೆ ನಟಿಸಿರುವ ಬಾಲಿವುಡ್ ನಟಿ ಕರೀನಾ ಕಪೂರ್, ಮಾಜಿ ಪ್ರಿಯಕರನ ಜೊತೆಗೆ ಕೆಲಸ ಮಾಡದೆ ಇರುವುದು ಪ್ರಾಚೀನ ಕಲ್ಪನೆ ಎಂದಿದ್ದಾರೆ.

೩೫ ವರ್ಷದ ನಟಿ ತಮ್ಮ ಅಧಿಕೃತ ಟ್ವಿಟ್ಟರ್ ಪುಟದಲ್ಲಿ ಬರೆದಿರುವಂತೆ “ಈ ಹಿಂದೆ ಡೇಟ್ ಮಾಡಿದವರ ಜೊತೆಗೆ ಕೆಲಸ ಮಾಡಲಾಗುವುದಿಲ್ಲ ಎಂಬುದು ಹಳೆಯ ಕಲ್ಪನೆ” ಎಂದು ಬರೆದಿದ್ದಾರೆ.

ಹಾಗೆಯೇ ಸಿನೆಮಾದ ಬಗ್ಗೆ ಒದಗಿಸಿರುವ ಮಾಹಿತಿಯಲ್ಲಿ ಒಂದೇ ಸಿನೆಮಾದಲ್ಲಿ ನಾವಿಬ್ಬರೂ ನಟಿಸಿದ್ದರು ಒಟ್ಟಾಗಿ ಚಿತ್ರೀಕರಣ ನಡೆಸಿಲ್ಲ ಎಂದು ಕೂಡ ಬೇಬೊ ಹೇಳಿದ್ದಾರೆ.
ಅಲ್ಲದೆ, ಅವರ ಜೊತೆಗೆ ಮತ್ತೆ ಕೆಲಸ ಮಾಡಲು ಬಯಸುತ್ತೇನೆ ಏಕೆಂದರೆ ನಾವಿಬ್ಬರೂ ನಟರು ಮತ್ತು ವೃತ್ತಿಪರರು ಎಂದು ಕೂಡ ಕರೀನಾ ಸೇರಿಸಿದ್ದಾರೆ.

“ಕೆಲಸದ ನಡುವೆ ಭಾವನೆಗಳ ಏಕೆ ಅಡ್ಡ ಬರಬೇಕು” ಎಂದು ಕೂಡ ಅವರು ಕೇಳಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ ತಮ್ಮ ಮಾಜಿ ಪ್ರಿಯಕರ ೩೫ ವರ್ಷದ ನಟನ ಜೊತೆಗೆ ಸಿನೆಮಾ ಪ್ರಚಾರದಲ್ಲಿ ಭಾಗಿಯಾಗಲು ಕರೀನಾ ಕಪೂರ್ ನಿರಾಕರಿಸಿದ್ದರು ಎನ್ನಲಾಗಿದೆ.

ಆದರೆ ಅವರನ್ನು ಒಪ್ಪಿಸಲು ನಿರ್ದೇಶಕ ಅಭಿಷೇಕ್ ಮತ್ತು ಸಹ ನಿರ್ಮಾಪಕಿ ಏಕ್ತಾ ಕಪೂರ್ ಸಂಧಾನ ನಡೆಸಿ ಇಬರನ್ನೂ ಟ್ರೇಲರ್ ಬಿಡುಗಡೆಗೆ ಒಟ್ಟಿಗೆ ತಂದಿದ್ದಾರೆ ಎನ್ನಲಾಗಿತ್ತು.

Write A Comment