ಮನೋರಂಜನೆ

ಪ್ರಶಸ್ತಿಗಾಗಿ ನಾನು ಹಂಬಲಿಸಲ್ಲ, ಅಭಿಮಾನಿಗಳ ಪ್ರೀತಿ ಸಾಕು: ಸನ್ನಿ ಲಿಯೋಜನ್

Pinterest LinkedIn Tumblr

Sunny-leone

ಮುಂಬೈ: ನಾನು ಯಾವುದೇ ರೀತಿಯ ಪ್ರಶಸ್ತಿಗಳಿಗಾಗಿ ಹಂಬಲಿಸಲ್ಲ. ನನ್ನ ಅಭಿಮಾನಿಗಳ ಪ್ರೀತಿ ಸಾಕು ಅವರ ಪ್ರೀತಿ, ಅಭಿಮಾನವನ್ನು ನಾನು ಹಂಬಲಿಸುತ್ತೇನೆ ಎಂದು ಇಂಡೋ-ಕೆನಡಿಯನ್ ಮೂಲದ ನೀಲಿ ಚಿತ್ರ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಹೇಳಿದ್ದಾರೆ.

ವಿಮರ್ಷಕರು ಹಾಗೂ ಅಭಿಮಾನಿಗಳ ಪ್ರೀತಿ ನಡುವಿನ ವ್ಯತ್ಯಾಸ ಕುರಿತಂತೆ ಹೇಳಿಕೊಂಡಿರುವ ಸನ್ನಿ ಲಿಯೋನ್. ವಿಮರ್ಷಕರು ಚಿತ್ರದ ಟಿಕೇಟ್ ಗಳನ್ನು ತೆಗೆದುಕೊಳ್ಳದೆ ಉಚಿತವಾಗಿ ಚಿತ್ರವನ್ನು ವೀಕ್ಷಿಸುತ್ತಾರೆ. ಆದರೆ ಅಭಿಮಾನಿಗಳು ನಮ್ಮ ಮೇಲಿನ ಅಭಿಮಾನದಿಂದ ಹಣ ಕೊಟ್ಟು ಟಿಕೇಟ್ ಪಡೆದು ಚಿತ್ರ ನೋಡುತ್ತಾರೆ. ಹೀಗಾಗಿ ಅಭಿಮಾನಿಗಳ ಪ್ರೀತಿ ನನಗೆ ಮುಖ್ಯ. ನಾನು ಯಾವುದೇ ಪ್ರಶಸ್ತಿಗಳಿಗಾಗಿ ಹಂಬಲಿಸಲ್ಲ. ನನ್ನ ಅಭಿಮಾನಿಗಳ ಪ್ರೀತಿ ನನಗೆ ಸಾಕು ಎಂದು ಹೇಳಿಕೊಂಡಿದ್ದಾರೆ.

ಸದ್ಯ ಬಾಲಿವುಡ್ ನಲ್ಲಿ ನನಗೆ ವಿಷಯ ಚಾಲಿತ ಚಿತ್ರಗಳು ಸಿಗುತ್ತೀವೆ. ವಿಷಯ ಚಾಲಿತ ಚಿತ್ರಗಳ ಪಾತ್ರಗಳಲ್ಲಿ ನಟಿಸಲು ನಟಿಯರು ಇಚ್ಛಿಸುತ್ತಾರೆ. ಅದೇ ರೀತಿ ನಾನು ಸಹ ವಿಷಯ ಚಾಲಿತ ಚಿತ್ರಗಳ ಆಯ್ಕೆಯಲ್ಲಿ ನಂಬಿಕೆ ಇಟ್ಟಿದ್ದೇನೆ ಎಂದರು.

Write A Comment