ಮನೋರಂಜನೆ

ಸಲ್ಮಾನ್‌ ಖಾನ್ ವಿರುದ್ಧ ಮಿಲ್ಖಾಸಿಂಗ್‌ ಆಕ್ರೋಶಗೊಂಡಿದ್ದು ಏಕೆ..? ಇಲ್ಲಿದೆ ಓದಿ…

Pinterest LinkedIn Tumblr

Milkha Singh_Salman Khan

ಚಂಡೀಗಡ/ನವದೆಹಲಿ (ಪಿಟಿಐ): ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡದ ರಾಯಭಾರಿಯಾಗಿ ಒಂದು ದಿನದ ಹಿಂದೆಯಷ್ಟೇ ನೇಮಕವಾಗಿರುವ ಸಲ್ಮಾನ್‌ಖಾನ್‌ ಆಯ್ಕೆಗೆ ಸಾಕಷ್ಟು ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಮಾಜಿ ಅಥ್ಲೀಟ್‌ ಮಿಲ್ಖಾ ಸಿಂಗ್ ಈ ಆಯ್ಕೆಗೆ ಕೆಂಡಾಮಂಡಲವಾಗಿದ್ದಾರೆ.

‘ಕ್ರೀಡೆಗೆ ರಾಯಭಾರಿಯನ್ನು ಬಾಲಿವುಡ್‌ನಿಂದ ಕರೆತರುವ ಅಗತ್ಯ ವಾದರೂ ಏನಿತ್ತು. ಇದಕ್ಕೆ ಕ್ರೀಡಾಪಟುಗಳನ್ನೇ ಆಯ್ಕೆ ಮಾಡ ಬಹುದಿತ್ತು. ಮತ್ತೊಮ್ಮೆ ಈ ಆಯ್ಕೆ ಯನ್ನು ಪರಿಶೀಲಿಸಬೇಕು’ ಎಂದು ಮಿಲ್ಖಾ ಸಿಂಗ್ ಅವರು ಒತ್ತಾಯಿಸಿದ್ದಾರೆ.

‘ಒಲಿಂಪಿಕ್ಸ್‌ಗೆ ದೇಶವನ್ನು ಪ್ರತಿ ನಿಧಿಸುವ ಕ್ರೀಡಾಪಟುಗಳು ನಿಜವಾದ ರಾಯಭಾರಿಗಳು. ಅವರು ಅಥ್ಲೀಟ್‌ಗಳೇ ಆಗಿರಬಹುದು ಅಥವಾ ವಾಲಿಬಾಲ್‌, ಶೂಟಿಂಗ್‌ ಯಾವುದೇ ಕ್ರೀಡೆಯನ್ನು ಪ್ರತಿನಿಧಿಸಬಹುದು’ ಎಂದು 85 ವರ್ಷದ ಮಿಲ್ಖಾ ಹೇಳಿದ್ದಾರೆ.

‘ಭಾರತದಲ್ಲಿ ಸಾಕಷ್ಟು ಹೆಮ್ಮೆಯ ಕ್ರೀಡಾಪಟುಗಳು ಇದ್ದಾರೆ. ಪಿ.ಟಿ ಉಷಾ, ರಾಜ್ಯವರ್ಧನ ಸಿಂಗ್‌ ರಾಥೋಡ್‌, ಅಜಿತ್‌ ಪಾಲ್‌ ಇವರೆಲ್ಲ ದೇಶಕ್ಕಾಗಿ ಬೆವರು ಮತ್ತು ರಕ್ತವನ್ನು ಹರಿಸಿದ್ದಾರೆ. ಇವರಿಗೆ ರಾಯಭಾರಿಗಳಾಗುವ ಅರ್ಹತೆ ಯಿದೆ. ಆದರೂ ಸಲ್ಮಾನ್ ಖಾನ್‌ ಆಯ್ಕೆ ಆಗತ್ಯವಾದರೂ ಏನಿತ್ತು’ ಎಂದು ಅವರು ಪ್ರಶ್ನಿಸಿದ್ದಾರೆ.

‘ನಾನು ಸಲ್ಮಾನ್‌ ಖಾನ್‌ ವಿರೋಧಿ ಅಲ್ಲ. ಆದರೆ ಭಾರತ ಒಲಿಂಪಿಕ್ಸ್‌ ಸಂಸ್ಥೆಯ ನಿರ್ಧಾರ ತಪ್ಪು. ಸರ್ಕಾರ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಬೇಕು. ಬಾಲಿವುಡ್‌ ನಟರೊಬ್ಬರು ಒಲಿಂಪಿಕ್ಸ್‌ ರಾಯಭಾರಿಯಾಗಿರುವುದು ಇದೇ ಮೊದಲು. ಬಾಲಿವುಡ್‌ನವರು ತಮ್ಮ ಮುಖ್ಯ ಕಾರ್ಯಕ್ರಮಗಳಿಗೆ ಕ್ರೀಡಾಪಟು ಗಳನ್ನು ರಾಯಭಾರಿಯಾಗಿ ಮಾಡಿದ ಉದಾಹರಣೆ ಇಲ್ಲ’ ಎಂದು ಸಿಂಗ್‌ ಖಾರವಾಗಿ ಹೇಳಿದ್ದಾರೆ.

ಮಿಲ್ಖಾ ಸಿಂಗ್‌ 1958 ಮತ್ತು 1962ರ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಏಷ್ಯನ್‌ ಕೂಟದಲ್ಲಿ ಒಟ್ಟು ನಾಲ್ಕು ಪದಕಗಳನ್ನು ಅವರು ಜಯಿಸಿದ್ದಾರೆ.

ನವದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಲ್ಮಾನ್‌ ಖಾನ್‌ ಅವರನ್ನು ರಾಯಭಾರಿಯನ್ನಾಗಿ ನೇಮ ಕ ಮಾಡಲಾಗಿತ್ತು. ಕಾರ್ಯಕ್ರಮದ ವೇದಿಕೆಯ ಮೇಲೆ ಐದು ಬಾರಿಯ ವಿಶ್ವ ಚಾಂಪಿಯನ್ಸ್ ಬಾಕ್ಸರ್‌ ಎಂ.ಸಿ ಮೇರಿ ಕೋಮ್‌, ಭಾರತ ಹಾಕಿ ತಂಡದ ನಾಯಕ ಸರ್ದಾರ್‌ ಸಿಂಗ್‌, ಶೂಟರ್‌ ಅಪೂರ್ವಿ ಚಾಂಡೇಲಾ ಸೇರಿದಂತೆ ಇತರ ಕ್ರೀಡಾಪಟುಗಳು ಕೂಡ ಇದ್ದರು.

ಯೋಗೇಶ್ವರ್‌ ಸಿಡಿಮಿಡಿ: ‘ಒಲಿಂಪಿಕ್ಸ್‌ ಕ್ರೀಡಾಕೂಟ ಸಿನಿಮಾ ಪ್ರಚಾರದ ವೇದಿಕೆ ಅಲ್ಲ. ಕ್ರೀಡೆಯಲ್ಲಿ ರಾಯಭಾರಿ ಯಾಗಿ ಆಯ್ಕೆಯಾಗಿರುವ ಸಲ್ಮಾನ್‌ ಖಾನ್‌ ಅವರ ಕೊಡುಗೆ ಏನು. ದೇಶಕ್ಕೆ ಪದಕಗಳು ಮುಖ್ಯ ಪ್ರಾಯೋಜಕರು ಅಲ್ಲ’ ಎಂದು ಕುಸ್ತಿಪಟು ಯೋಗೇಶ್ವರ್ ದತ್‌ ಐಒಎ ಕ್ರಮಕ್ಕೆ ತಿರುಗೇಟು ನೀಡಿದ್ದಾರೆ.

ನಿರ್ಧಾರ ಸಮರ್ಥಿಸಿಕೊಂಡ ಐಒಎ
‘ಖ್ಯಾತನಾಮರು ಮುಂದೆ ಬಂದು ಜನರ ಬಳಿ ಮನವಿ ಮಾಡಿದರೆ ಕ್ರೀಡಾಪಟುಗಳಿಗೆ ಸಹಾಯ ಸಿಗಲಿದೆ. ಇದರಿಂದ ಕ್ರೀಡೆಯ ಬೆಳವಣಿಗೆ ಕೂಡ ಸಾಧ್ಯವಿದೆ. ಸಿನಿಮಾ ನಟರಿಂದ ಯುವಕರು ಪ್ರಭಾವಿತರಾಗುತ್ತಾರೆ. ಇದನ್ನು ನಾವು ಬಳಸಿಕೊಳ್ಳುವುದರಲ್ಲಿ ತಪ್ಪೇನು ಇಲ್ಲ. ಇದಕ್ಕಾಗಿ ನಾವು ಸಲ್ಮಾನ್‌ಗೆ ಹಣ ನೀಡಿಲ್ಲ’ ಎಂದು ಐಒಎ ತನ್ನ ನಿರ್ಧಾರ ಸಮರ್ಥಿಸಿಕೊಂಡಿದೆ.

ಬೆಂಬಲ: ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ಹಾಗೂ ಬಾಕ್ಸರ್‌ ಮೇರಿ ಕೋಮ್‌ ಸಲ್ಮಾನ್‌ ರಾಯಭಾರಿಯಾಗಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

‘ಸಲ್ಮಾನ್‌ಗೆ ದೊಡ್ಡ ಅಭಿಮಾನ ಬಳಗವಿದೆ. ಇದರಿಂದ ಒಲಿಂಪಿಕ್ಸ್‌ಗೆ ಹೆಚ್ಚು ಪ್ರಚಾರ ಸಿಗಲಿದೆ’ ಎಂದು ಸರ್ದಾರ್ ಅಭಿಪ್ರಾಯಪಟ್ಟಿದ್ದಾರೆ. ‘ಒಲಿಂಪಿಕ್ಸ್‌ನಲ್ಲಿ ಅಥ್ಲೀಟ್‌ಗಳು ಕೇಂದ್ರಬಿಂದುವಾಗಬೇಕು. ಸಿನಿಮಾ ನಟರಲ್ಲ. ಒಲಿಂಪಿಕ್ಸ್‌ಗೆ ಸಮಯ ಕಡಿಮೆ ಉಳಿದಿದೆ. ಕ್ರೀಡಾಪಟುಗಳು ಅಭ್ಯಾಸ ದ ಕಡೆ ಗಮನವಹಿಸಬೇಕು’ ಎಂದು ಚೆಸ್‌ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್‌ ಆನಂದ್ ಹೇಳಿದ್ದಾರೆ

Write A Comment