ಮನೋರಂಜನೆ

ವಿಶಿಷ್ಟ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಮಾಸ್ಟರ್‌ಬಾಸ್ಟರ್

Pinterest LinkedIn Tumblr

sachin

ಮುಂಬೈ: ಕ್ರಿಕೆಟ್ ದೇವರೆಂದೇ ಗುರುತಿಸಿಕೊಂಡಿರುವ ಮಾಸ್ಟರ್‌ಬಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ತಮ್ಮ 43ನೆ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡರು.

ಬೆಳಗ್ಗೆ ಎಂಐಜಿ ಕ್ಲಬ್‌ನಲ್ಲಿ ಚಿಣ್ಣರೊಂದಿಗೆ ಕ್ರಿಕೆಟ್ ಆಡುವ ಮೂಲಕ ಈ ಹುಟ್ಟುಹಬ್ಬವನ್ನು ಸ್ಮರಣೀಯವಾಗಿ ಆಚರಿಸಿಕೊಂಡಿದ್ದೇನೆ ಎಂದು ತಮ್ಮ ಟ್ವಿಟರ್‌ನಲ್ಲಿ ಫೋಟೋಗಳನ್ನು ಅಪ್‌ಲೋಡ್ ಮಾಡುವ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಪುಟ್ಟ ಮಕ್ಕಳೊಂದಿಗೆ ಆಡುವುದೆಂದರೆ ನನಗೆ ಮೊದಲಿನಿಂದಲೂ ತುಂಬಾ ಇಷ್ಟದ ಕೆಲಸ. ಇಂದು ಪುಟ್ಟ ಮಕ್ಕಳೊಂದಿಗೆ ಕೆಲ ಹೊತ್ತು ಕಾಲ ಕಳೆದು ಅವರಿಗೆ ಕ್ರಿಕೆಟ್‌ನ ಕೆಲವು ಪಟುಗಳನ್ನು ಹೇಳಿಕೊಡುವ ಮೂಲಕ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದೇನೆ ಎಂದು ಅವರು ಟ್ವಿಟರ್‌ನಲ್ಲಿ ಟ್ವಿಟ್ಟಿಸಿದ್ದಾರೆ. ಸಚಿನ್ ತೆಂಡೂಲ್ಕರ್ ತಮ್ಮ ಕ್ರಿಕೆಟ್ ಜೀವನದಲ್ಲಿ ಸಾಕಷ್ಟು ಮೈಲುಗಲ್ಲನ್ನು ಸ್ಥಾಪಿಸಿದ್ದಾರೆ. ಅವರು ಕ್ರೀಡಾಂಗಣಕ್ಕೆ ಇಳಿದರೆ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ಸಚಿನ್, ಸಚಿನ್ ಎಂದು ಉದ್ಘಾರ ಮಾಡುವ ಮೂಲಕ ತಮ್ಮ ಪ್ರೇಮವನ್ನು ವ್ಯಕ್ತಪಡಿಸುತ್ತಿದ್ದರು.

ಅಂತಹ ಸಚಿನ್ 2013ರಲ್ಲಿ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದಾಗ ಸಚಿನ್‌ನ ಆಟವನ್ನು ಇನ್ನಷ್ಟು ಕಾಲ ನೋಡಬೇಕೆಂಬ ಅವರ ಕನಸಿಗೆ ತೆರೆಬಿದ್ದರೂ ಪ್ರತಿ ವರ್ಷವೂ ದೇಶದಲ್ಲೆಡೆ ಅಭಿಮಾನಿಗಳು ಏಪ್ರಿಲ್ 24ರಂದು ಸಚಿನ್ ತೆಂಡೂಲ್ಕರ್‌ರ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳನ್ನು ಸೂರೆಗೊಂಡಿರುವ ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಏಕದಿನದಲ್ಲಿ ದ್ವಿಶತಕ ಗಳಿಸಿದ ಮೊದಲ ಕ್ರಿಕೆಟಿಗ ಎಂಬ ಕೀರ್ತಿಗೆ ಭಾಜನರಾಗಿದ್ದು, 200 ಟೆಸ್ಟ್‌ಗಳಿಂದ 15,921 ರನ್‌ಗಳು, 463 ಏಕದಿನ ಪಂದ್ಯಗಳಿಂದ 18,426 ರನ್‌ಗಳನ್ನು ಗಳಿಸಿರುವುದೇ ಅಲ್ಲದೆ ಶತಕಗಳ ಶತಕ ಗಳಿಸಿದ ಆಟಗಾರರ ಎಂದು ಗುರುತಿಸಿಕೊಂಡಿದ್ದಾರೆ.

Write A Comment