ಕನ್ನಡ ವಾರ್ತೆಗಳು

ಗೂಂಡಾ ಕಾಯ್ದೆ : ಉಳ್ಳಾಲದ ಅಲ್ತಾಪ್‌ ಕಲಬುರ್ಗಿ ಜೈಲಿಗೆ

Pinterest LinkedIn Tumblr

ಉಳ್ಳಾಲ : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿ ಉಳ್ಳಾಲ ಧರ್ಮನಗರದ ನಿವಾಸಿ ಅಬ್ದುಲ್ ಖಾದರ್ ಎಂಬವರ ಪುತ್ರ ಅಲ್ತಾಪ್ (29 ) ಎಂಬತಾನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕಲಬುರ್ಗಿ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದೆ.ಈತನ ವಿರುದ್ಧ ಐದು ಗಂಭಿರ ಪ್ರಕರಣಗಳು ದಾಖಲಾಗಿದೆ.

ಪೊಲೀಸ್ ನಿರೀಕ್ಷಕರು ಉಳ್ಳಾಲ ಪೊಲೀಸ್ ಠಾಣೆ ಹಾಗೂ ಸಹಾಯಕ ಪೊಲೀಸ್ ಆಯುಕ್ತರು ಮಂಗಳೂರು ದಕ್ಷಿಣ ಉಪ ವಿಭಾಗ ಮತ್ತು ಉಪ ಪೊಲೀಸ್ ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ ಮಂಗಳೂರು ನಗರ ಇವರುಗಳ ವರದಿಯ ಆಧಾರದ ಮೇರೆಗೆ ಪೊಲೀಸ್ ಆಯುಕ್ತರು ಮಂಗಳೂರು ನಗರ ಇವರು ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದ ಆಜ್ಞೆಯನ್ನು ಹೊರಡಿಸಿದ್ದಾರೆ.

Write A Comment