ಕರ್ನಾಟಕ

ಕನ್ನಡದ ಉದ್ಯಮಿಗಳಿಗೆ ಅಭಿಮಾನ ಪೂರ್ವಕ ಸನ್ಮಾನ

Pinterest LinkedIn Tumblr

1

ಬೆಂಗಳೂರು: ಛಲ ಹಾಗೂ ಗುರಿಯಿಂದ ಏನನ್ನಾದರೂ ಸಾಧಿಸಲು ಸಾಧ್ಯ ಎಂಬುದಕ್ಕೆ ವಿದೇಶದಲ್ಲಿ ನೆಲೆಸಿರುವ ಕನ್ನಡದ ಉದ್ಯಮಿಗಳಾದ ಚಿಕ್ಕಸ್ವಾಮಿ ಹಾಗೂ ರವೀಶ್‌ಗೌಡ ಅವರೇ ಸಾಕ್ಷಿಯಾಗಿದ್ದಾರೆ ಎಂದು ಸಂಸದ ಸಿ.ಎಸ್.ಪುಟ್ಟರಾಜು ಹೇಳಿದರು.

ಅಭಿಮಾನಿ ಮತ್ತು ಸಿಎಂಆರ್ ಸ್ನೇಹ ಬಳಗದ ವತಿಯಿಂದ ಅಭಿಮಾನಿ ವಸತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕನ್ನಡಿಗ ಉದ್ಯಮಿಗಳಾದ ಅಮೆರಿಕದ ಥಾಯ್‌ಕೆರಿ ಸಮೂಹ ಸಂಸ್ಥೆಯ ಅಧ್ಯಕ್ಷ ಚಿಕ್ಕಸ್ವಾಮಿ ಮತ್ತು ದುಬೈನ ಫಾರ್ಚ್ಯೂನ್ ಗ್ರೂಪ್‌ನ ಅಧ್ಯಕ್ಷ ರವೀಶ್‌ಗೌಡ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ವಿದೇಶದಲ್ಲಿ ತಮ್ಮ ಉದ್ಯಮ ಸ್ಥಾಪಿಸುವುದರೊಂದಿಗೆ ಇತರರಿಗೂ ಮಾರ್ಗದರ್ಶಕರಾಗಿರುವ ಇವರ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ ಎಂದರು.

ಕನ್ನಡಿಗರೇ ಕಂಪೆನಿ ನಿರ್ಮಿಸಿರುವುದು ಒಂದು ಹೆಗ್ಗಳಿಕೆ. ಬಡತನದ ಹಿನ್ನೆಲೆಯಿಂದ ಬಂದರೂ ತಮ್ಮ ಧ್ಯೇಯ ಸಾಧಿಸಲು ಮುನ್ನುಗ್ಗಿ ಸಾಧನೆ ಮೆರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲಿ ದುಡಿದ ದುಡ್ಡಿನಲ್ಲಿ ಮತ್ತೆ ಸ್ವದೇಶದಲ್ಲಿ ಉದ್ಯಮ ಆರಂಭಿಸುವ ಮೂಲಕ ಇಲ್ಲಿ ದುಡಿಯುವ ಜನರಿಗೂ ಒತ್ತಾಸೆಯಾಗಿದ್ದಾರೆ. ಜೊತೆಗೆ ಇತರರಿಗೆ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು. ಸಿಎಂಆರ್ ಗ್ರೂಪ್‌ನ ಅಧ್ಯಕ್ಷ ಕೆ.ಸಿ.ರಾಮಮೂರ್ತಿ ಮಾತನಾಡಿ, ವಿದೇಶಕ್ಕೆ ಹೋದರೂ ನಮ್ಮ ಸಂಸ್ಕೃತಿ ಮರೆತಿಲ್ಲ. ಯಾರಾದರೂ ಅವರ ಮನೆಗೆ ಹೋದರೆ ತಮ್ಮ ಮನೆಯವರಂತೆ ಆದರಿಸುತ್ತಾರೆ ಎಂದರು. ಸಮಾರಂಭದಲ್ಲಿ ಅಭಿಮಾನಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಟಿ.ವೆಂಕಟೇಶ್, ಶಾಸಕ ಗೋಪಾಲಯ್ಯ, ಟಿ.ನಾಗರಾಜ್ ಮತ್ತಿತರರು ಪಾಲ್ಗೊಂಡಿದ್ದರು.

Write A Comment