ಮನೋರಂಜನೆ

ನಟ ಹೃತಿಕ್‌ ರೋಷನ್‌ ಗೆ ಬೆತ್ತಲೆ ಫೋಟೋ ಕಳುಹಿಸಿದ್ದ ನಟಿ ಕಂಗನಾ ರಾಣಾವತ್‌ ! ಫೋಟೋ ಕುರಿತು ಇ-ಮೇಲ್‌ ನಲ್ಲಿ ಬರೆದಿದ್ದು ಹೀಗೆ…!

Pinterest LinkedIn Tumblr

kangana-hrithik

ನವದೆಹಲಿ: ನಟ ಹೃತಿಕ್‌ ರೋಷನ್‌ ತನ್ನ ಮಾಜಿ ಪ್ರಿಯಕರ ಎಂಬ “ಬಾಂಬ್‌’ ಅನ್ನು ನಟಿ ಕಂಗನಾ ರಾಣಾವತ್‌ ಸಿಡಿಸುವ ಮೂಲಕ ಆರಂಭಗೊಂಡ ಆ ನಟರಿಬ್ಬರ ಸಂಘರ್ಷಕ್ಕೆ ತಿರುವು ಸಿಕ್ಕಿದೆ. ಕಂಗನಾ ಹೃತಿಕ್‌ ಅವರಿಗೆ ಕಳುಹಿಸಿದ್ದರೆನ್ನಲಾದ ಇ-ಮೇಲ್‌ಗ‌ಳನ್ನು ಪರಿಶೀಲನೆಗೆ ಒಳಪಡಿಸಿದಾಗ ಆಕೆ ಹೃತಿಕ್‌ ಜತೆ ಏಕಮುಖದ ಸಂಬಂಧ ಹೊಂದಿದ್ದರು ಎಂಬಂತೆ ಕಂಡುಬರುತ್ತಿದೆ. ಅಲ್ಲದೆ ಆ ಸಂಬಂಧ ಆಕೆಯ ಕಲ್ಪನೆ ಇದ್ದಂತಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಕಂಗನಾ ಅವರು ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ಸಲ್ಲಿಸಿರುವ ಹೃತಿಕ್‌, ಅದರ ಜತೆಗೆ ಕಂಗನಾ ಕಳುಹಿಸಿದ್ದ ಹಲವು ಇ-ಮೇಲ್‌ಗ‌ಳನ್ನೂ ಹಸ್ತಾಂತರಿಸಿದ್ದಾರೆ. ಆ ಪೈಕಿ ಒಂದು ಇ-ಮೇಲ್‌ನಲ್ಲಿ ಕಂಗನಾ ಅವರು ಹೃತಿಕ್‌ಗೆ ಬೆತ್ತಲೆ ಫೋಟೋ ಕಳುಹಿಸಿದ್ದ ಅಂಶವೂ ಇದೆ. “ಮೊದಲ ಬಾರಿ ಜತೆಯಾದಾಗ ಇದು ನಿನಗಾಗಿ ಕಾದಿದೆ’ ಎಂಬ ಬರಹವನ್ನೂ ಕಂಗನಾ ಬರೆದಿದ್ದಾರೆ. ಕಂಗನಾ ಬರೆದ ಇ-ಮೇಲ್‌ಗ‌ಳಿಗೆ ಹೃತಿಕ್‌ ಪ್ರತಿಕ್ರಿಯಿಸಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಕೋರ್ಟ್‌ ಸೂಚನೆ: ಹೃತಿಕ್‌ ಹೆಸರಿನಲ್ಲಿದ್ದ ನಕಲಿ ಇಮೇಲ್‌ ಐಡಿ ಸೂತ್ರಧಾರರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಅಮೆರಿಕ ಕಂಪನಿಗೆ ಮುಂಬೈ ಕೋರ್ಟ್‌ ಸೂಚಿಸಿದೆ.

Write A Comment