ಮನೋರಂಜನೆ

ವೃದ್ಧಾಶ್ರಮದಲ್ಲಿ ಹಿರಿಯ ಜೀವಗಳೊಂದಿಗೆ ಕಾಲ ಕಳೆದ ವಿರಾಟ್

Pinterest LinkedIn Tumblr

virat

ಪುಣೆ: ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಪುಣೆಯ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿರುವ ಹಿರಿಯರೊಂದಿಗೆ ಕೆಲಕಾಲ ಸಮಯ ಕಳೆದರು.

ವಿರಾಟ್ ಅವರನ್ನ ಕಂಡು ಆಶ್ರಮದಲ್ಲಿದ್ದ ಹಿರಿಯರು ಕೂಡಾ ಖುಷಿಪಟ್ಟರು. ಕೆಲವರಂತೂ ತಮ್ಮ ಮಗನನ್ನೇ ಕಂಡಷ್ಟು ಖುಷಿಯಲ್ಲಿದ್ದರು. ಬಹಳ ದಿನಗಳ ಬಳಿಕ ಈ ಹಿರಿಯರ ಮೊಗದಲ್ಲಿ ಸಂತೋಷ ಕಂಡು ಬಂದಿತ್ತು.

ವಿರಾಟ್ ಕೂಡಾ ಎಲ್ಲರನ್ನೂ ಪ್ರೀತಿಯಿಂದಲೇ ಮಾತನಾಡಿಸಿದರು. ಈ ಆಶ್ರಮದಲ್ಲಿ 57 ಹಿರಿಯರಿದ್ದು, ಇವರೆಲ್ಲರಿಗೂ ತಮ್ಮ ಫೌಂಡೇಷನ್ ಮೂಲಕ ಭವಿಷ್ಯದಲ್ಲಿಯೂ ಸಹಾಯ ಮಾಡುವುದಾಗಿ ವಿರಾಟ್ ಘೋಷಿಸಿದರು.

Write A Comment