ಕನ್ನಡ ವಾರ್ತೆಗಳು

ಕಿಟಿಕಿ ಮುರಿದು ಕಳ್ಳತನ : 80 ಪವನ್ ಚಿನ್ನಾಭರಣ ದೋಚಿ ಪರಾರಿ.

Pinterest LinkedIn Tumblr

kasagodu_kalavu_photo

ಕಾಸರಗೋಡು,ಎ.23: ಕಿಟಿಕಿ ಮುರಿದು ಮನೆಗೆ ನುಗ್ಗಿದ ಕಳ್ಳರು 80 ಪವನ್ ಚಿನ್ನಾಭರಣ ಹಾಗೂ ನಗದು ಕಳವುಗೈದ ಘಟನೆ ಮಂಜೇಶ್ವರ ಸಮೀಪದ ಕಡ೦ಬಾರ್‌ನಲ್ಲಿ ನಿನ್ನೆ ನಡೆದಿದೆ.

ಹೊಸಂಗಡಿ ಸಮೀಪದ ಕಡಂಬಾರು ಬೆಜ್ಜ ರಸ್ತೆಯ ಪಳ್ಳ ನಿವಾಸಿ ಸಂಜೀವಿ ಶೆಟ್ಟಿ ಎಂಬವರ ಮನೆಯಿಂದ ಕಳ್ಳತನ ನಡೆಸಲಾಗಿದೆ. ಮನೆಯಲ್ಲಿದ್ದ ಸುಮಾರು 80 ಪವನ್ ಚಿನ್ನಾಭರಣ ಮತ್ತು ಆರು ಸಾವಿರ ರೂ. ನಗದು ಕಳವು ಮಾಡಲಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ

ಮನೆಯವರು ರಾತ್ರಿ ದೇವಸ್ಥಾನದ ಉತ್ಸವಕ್ಕೆ ತೆರಳಿದ್ದರು. ಬೆಳಿಗ್ಗೆ ಮರಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಅಡುಗೆ ಕೋಣೆಯ ಕಿಟಿಕಿ ಮುರಿದು ಒಳನುಗ್ಗಿರುವ ಕಳ್ಳರು ಚಿನ್ನಾಭರಣ ವನ್ನು ಕಳವು ಮಾಡಿದ್ದಾರೆ. ಮಂಜೇಶ್ವರ ಠಾಣಾಧಿಕಾರಿ ಪ್ರಮೋದ್, ಬೆರಳಚ್ಚು ತಜ್ಷರು ಹಾಗೂ ಶ್ವಾನದಳ ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

Write A Comment