ಅಂತರಾಷ್ಟ್ರೀಯ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೊಸ ಲುಕ್ !

Pinterest LinkedIn Tumblr

dawood-new

ನವದೆಹಲಿ: ಭೂಗತ ಪಾತಕಿ, ಮುಂಬೈ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ ಈಗ ಹೇಗಿದ್ದಾನೆ ಎಂಬ ಹೊಸ ಫೋಟೋ ಲಭ್ಯವಾಗಿರುವುದಾಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

1993ರ ಮುಂಬೈ ಸ್ಫೋಟದ ನಂತರ ದಾವೂದ್ ಇಬ್ರಾಹಿಂ ಒಂದೇ ವಿಧದ ಫೋಟೋ ಸಾಮಾಜಿಕ ಜಾಲಸತಾಣಗಳಲ್ಲಿ ಹರಿದಾಡುತ್ತಿತ್ತು. ಇದೀಗ ಮೊದಲ ಬಾರಿಗೆ ಹೊಸ ಫೋಟೋ ಲಭ್ಯವಾಗಿರುವುದಾಗಿ ಪತ್ರಿಕೆ ವರದಿಯಲ್ಲಿ ಹೇಳಿದೆ.

ಕೆಲವು ವರ್ಷಗಳ ಹಿಂದೆ ಕರಾಚಿಗೆ ತೆರಳಿದ್ದ ಭಾರತದ ಪತ್ರಕರ್ತ ವಿವೇಕ್ ಅಗರ್ ವಾಲ್ ಈ ಫೋಟೋವನ್ನು ತೆಗೆದಿದ್ದರು. ಆ ಸಂದರ್ಭದಲ್ಲಿ ದಾವೂದ್ ಇಬ್ರಾಹಿಂ ಮೊಯಿನ್ ಪ್ಯಾಲೇಸ್ ನಲ್ಲಿ ವಾಸವಾಗಿದ್ದನಂತೆ, ಇದೀಗ ಹೊಸ ಬಂಗ್ಲೆಗೆ ಸ್ಥಳಾಂತರಗೊಂಡಿರುವುದಾಗಿ ವರದಿ ಹೇಳಿದೆ.

ಈಗ ಲಭ್ಯವಾಗಿರುವ ಪೂರ್ಣ ಪ್ರಮಾಣದ ಫೋಟೋದಲ್ಲಿ ದಾವೂದ್ 60 ವರ್ಷದವನಾಗಿದ್ದು, ಕಪ್ಪು ಮತ್ತು ಬಿಳಿ ಕುರ್ತಾ ಫೈಜಾಮಾ ಹಾಕಿಕೊಂಡಿದ್ದಾನೆ.

Write A Comment