ರಾಷ್ಟ್ರೀಯ

ಹಳ್ಳಿಗಳ ಪ್ರಗತಿಯಿಂದ ಮಾತ್ರವೇ ದೇಶೋದ್ಧಾರ: ರಾಜಸ್ತಾನ ರಾಜ್ಯಪಾಲ ಕಲ್ಯಾಣ್ ಸಿಂಗ್ ಅಭಿಮತ

Pinterest LinkedIn Tumblr

Kalyan-Singhಕೋಟಾ, ರಾಜಸ್ತಾನ (ಪಿಟಿಐ): ದೇಶದ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಲು ಕೇಂದ್ರ ಸರ್ಕಾರದ ‘ಸ್ಮಾರ್ಟ್ ಸಿಟಿ’ ಯೋಜನೆ ‘ಸಾಲದು’, ಹಳ್ಳಿಗಳನ್ನೂ ‘ಸ್ಮಾರ್ಟ್‌’ ಮಾಡಬೇಕಿದೆ ಎಂದು ರಾಜಸ್ತಾನ ರಾಜ್ಯಪಾಲ ಕಲ್ಯಾಣ್ ಸಿಂಗ್ ಒತ್ತಿ ಹೇಳಿದ್ದಾರೆ.
‘ದೇಶದ ಸರ್ವಾಂಗೀಣ ಪ್ರಗತಿ ಹಾಗೂ ಅಭಿವೃದ್ಧಿಗಾಗಿ ನಗರಗಳಿಗಿಂತಲೂ ಹಳ್ಳಿಗಳನ್ನು ಸ್ಮಾರ್ಟ್‌ ಮಾಡಬೇಕಾದ ಅಗತ್ಯವಿದೆ’ ಎಂದು ಸಿಂಗ್ ಅವರು ರಾಜಸ್ತಾನ ತಾಂತ್ರಿಕ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ಬುಧವಾರ ಅಭಿಪ್ರಾಯಪಟ್ಟಿದ್ದಾರೆ.
ನೈಜವಾಗಿ ದೇಶವು ಹಳ್ಳಿಗಳಲ್ಲಿ ನೆಲೆಸಿದ್ದು, ಬರೀ ನಗರಗಳನ್ನು ‘ಸ್ಮಾರ್ಟ್‌’ ಮಾಡುವ ಮೂಲಕ ದೇಶದ ಪ್ರಗತಿ ಹಾಗೂ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಸಿಂಗ್ ಅವರು ಪ್ರತಿಪಾದಿಸಿದ್ದಾರೆ.

Write A Comment