ಕರ್ನಾಟಕ

ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ಸ್ಯಾಂಡಲ್ ವುಡ್ ನಟಿ ಮಾಲಾಶ್ರೀ!

Pinterest LinkedIn Tumblr

Ganga-(18)ಬೆಂಗಳೂರು:ನನ್ನ 25 ವರ್ಷಗಳ ಸಿನಿಮಾ ಜೀವನದಲ್ಲಿ ಎಂದೂ ಹೀಗೆ ಆಗಿಲ್ಲ..ಎಂದು ಸ್ಯಾಂಡಲ್ ವುಡ್ ಹಿರಿಯ ನಟಿ ಮಾಲಾಶ್ರೀ ಉಪ್ಪು, ಹುಳಿ, ಖಾರ ಸಿನಿಮಾ ಸಂಬಂಧ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು.

ನಿರ್ಮಾಪಕ ಕೆ.ಮಂಜು ನಿರ್ಮಾಣದ ಉಪ್ಪು, ಹುಳಿ, ಖಾರ ಸಿನಿಮಾದಲ್ಲಿ ಮಾಲಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸಬೇಕಿತ್ತು. ಅದಕ್ಕಾಗಿ 2 ದಿನಗಳ ಕಾಲ ಶೂಟಿಂಗ್ ನಲ್ಲಿಯೂ ಭಾಗವಹಿಸಿ ಅಭಿನಯಿಸಿದ್ದರು. ಆದರೆ ಏಕಾಏಕಿ ಮಾಲಾಶ್ರೀ ಅವರನ್ನು ಸಿನಿಮಾದಿಂದ ತೆಗೆದು ಹಾಕಿರುವುದೇ ನಟಿಯ ದುಃಖಕ್ಕೆ ಕಾರಣವಾಗಿದೆ.

ಸಿನಿಮಾ ಸಂಬಂಧ ಗುರುವಾರ ಸುದ್ದಿಗೋಷ್ಠಿ ನಡೆಸಿ, ನಿರ್ಮಾಪಕ ಕೆ.ಮಂಜು ವಿರುದ್ಧ ಅಸಮಾಧಾನವ್ಯಕ್ತಪಡಿಸಿ, ಕಣ್ಣೀರಿಟ್ಟರು. ನಿರ್ದೇಶಕ ಇಮ್ರಾನ್ ಸರ್ದಾರಿಯಾ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.
-ಉದಯವಾಣಿ

Write A Comment