ರಾಷ್ಟ್ರೀಯ

ಹಂದ್ವಾರ ಘಟನೆ: ಆರೋಪಿ ಬಂಧನ

Pinterest LinkedIn Tumblr

06o7p7wuಶ್ರೀನಗರ(ಪಿಟಿಐ): ಹಂದ್ವಾರದಲ್ಲಿ ಭದ್ರತಾ ಪಡೆ ಸಿಬ್ಬಂದಿ ಬಾಲಕಿಯನ್ನು ಪೀಡಿಸಿದ್ದಾರೆ ಎಂಬ ಘಟನೆ ಸಂಬಂಧ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಗುರುತಿಸಲಾಗಿತ್ತು. ಈ ಪೈಕಿ ಹಿಲಾಲ್ ಅಹಮದ್ ಬಂದೇ ಎಂಬಾತನನ್ನು ಹಂದ್ವಾರದಲ್ಲಿ ಸೋಮವಾರ ರಾತ್ರಿ ಜಮ್ಮು–ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ ಸಂಬಂಧ ಜಮ್ಮು–ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರ ಪ್ರದೇಶದಲ್ಲಿ ಸಾರ್ವಜನಿಕರು ಒಂದು ವಾರದಿಂದ ನಡೆಸುತ್ತಿರುವ ಪ್ರತಿಭಟನೆ ಹಿಂಸಾ ಸ್ವರೂಪ ಪಡೆದುಕೊಂಡಿದೆ. ಬುಧವಾರ ಶ್ರೀನಗರ, ಕುಪ್ವಾರ ಜಿಲ್ಲೆಯ ವಿವಿಧೆಡೆ ಕರ್ಫ್ಯೂ ವಿಧಿಸಲಾಗಿತ್ತು.
ಘಟನೆ ಸಂಬಂಧ ನ್ಯಾಯಾಧೀಶರ ಎದುರು ವಿಚಾರಣೆ ವೇಳೆ ಬಾಲಕಿ ಇಬ್ಬರು ಆರೋಪಿಗಳ ಹೆಸರನ್ನು ಹೇಳಿದ್ದಾಳೆ.

Write A Comment