ಜಮ್ಮು(ಪಿಟಿಐ): ಪಾಕಿಸ್ತಾನ ಪಡೆ ಮತ್ತೆ ಕನದ ವಿರಾಮ ಉಲ್ಲಂಘಿಸಿದ್ದು, ಜಮ್ಮು–ಕಾಶ್ಮೀರದ ಸಾಂಬಾ ಜಿಲ್ಲೆ ವ್ಯಾಪ್ತಿಯ ಅಂತರರಾಷ್ಟ್ರೀಯ ಗಡಿಯಲ್ಲಿ ಮಂಗಳವಾರ ಬೆಳಿಗ್ಗೆ ಗುಂಡಿನ ದಾಳಿ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಕಾತ್ರಾಕ್ಕೆ ಭೇಟಿ ನೀಡುವ ಕೆಲ ಗಂಟೆ ಮೊದಲು ಈ ಘಟನೆ ನಡೆದಿದೆ.
ಪಾಕ್ ಪಡೆ ಸಾಂಬಾ ವಲಯದಲ್ಲಿ ಬೆಳಿಗ್ಗೆ 4ರಿಂದ5 ಸುತ್ತು ಗುಂಡಿನ ದಾಳಿ ನಡೆಸಿದೆ. ಬಿಎಸ್ಎಫ್ ಪ್ರತಿ ದಾಳಿ ನಡೆಸಿದ್ದು, ಯಾವುದೇ ಜೀವ ಹಾನಿ ಹಾಗೂ ನೋವು ಸಂಭವಿಸಿಲ್ಲ ಎಂದು ಗಡಿ ಭದ್ರತಾಪಡೆಯ(ಬಿಎಸ್ಎಫ್) ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಇಲ್ಲಿನ ಮಾತಾ ವೈಷ್ಣವೊ ದೇವಿ ವಿಶ್ವವಿದ್ಯಾಲಯ ಆವರಣಕ್ಕೆ ಆಗಮಿಸಲಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಕ್ರೀಡಾಂಗಣ ಉದ್ಘಾಟನೆ ನೆರವೇರಿಸಿ, ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ರಾಷ್ಟ್ರೀಯ