ಬರ್ಸಾತ್, (ಪಶ್ಚಿಮ ಬಂಗಾಳ): 2014ರಲ್ಲಿ ಸಮಾಜವಿರೋಧಿ ಶಕ್ತಿಗಳ ವಿರುದ್ಧ ನಡೆದ ಹೋರಾಟದ ಮುಂಚೂಣಿಯಲ್ಲಿದ್ದ ಉತ್ತರ 24 ಪರಗಣ ಜಿಲ್ಲೆಯ 21ರ ಹರೆಯದ ಕಾಲೇಜು ವಿದ್ಯಾರ್ಥಿ ಶೌರವ್ ಚೌಧರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯವೊಂದು ಮಂಗಳವಾರ 8 ಮಂದಿಗೆ ಮರಣದಂಡನೆ ಹಾಗೂ ಒಬ್ಬನಿಗೆ ಜೀವಾವಧಿ ಸಜೆಯನ್ನು ವಿಧಿಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ತೀರ್ಪು ಪ್ರಕಟಿಸಿದ ಬರ್ಸಾತ್ನ 7ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ದಮನ್ ಪ್ರಸಾದ್ ಬಿಸ್ವಾಸ್ ಅವರು ಮಹಿಳೆಯೊಬ್ಬಳು ಸೇರಿದಂತೆ ಮೂವರಿಗೆ ಐದುವರ್ಷಗಳ ಸೆರೆವಾಸವನ್ನೂ ವಿಧಿಸಿದರು. 2014ರ ಜುಲೈ 5ರಂದು ಜಿಲ್ಲೆಯ ಬಮೂನ್ಗಚಿಯಲ್ಲಿ ಈ ಹತ್ಯೆ ನಡೆದಿತ್ತು. ಹತ್ಯೆಯ ಬಳಿಕ ಆತನ ಶವವನ್ನು ರೈಲು ಹಳಿ ಸಮೀಪ ಎಸೆಯಲಾಗಿತ್ತು.