ಮನೋರಂಜನೆ

ಕಾನ್ 2016ರಲ್ಲಿ ಲಾರಿಯಲ್ ಪ್ಯಾರಿಸ್ ಪ್ರತಿನಿಧಿಸಲಿರುವ ಸೋನಂ-ಐಶ್ವರ್ಯ

Pinterest LinkedIn Tumblr

Sonam, Aishwarya

ಮುಂಬೈ: ಮುಂಬರಲಿರುವ 69ನೇ ಕಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಲಂಕಾರಿಕ ದೈತ್ಯ ಸಂಸ್ಥೆ ಲಾರಿಯಲ್ ಪ್ಯಾರಿಸ್ ಪ್ರಚಾರ ರಾಯಭಾರಿಗಳಾಗಿ ಬಾಲಿವುಡ್ ನಟಿಯರಾದ ಸೋನಂ ಕಪೂರ್ ಮತ್ತು ಐಶ್ವರ್ಯ ರಾಯ್ ಬಚ್ಚನ್ ಭಾಗವಹಿಸಲಿದ್ದಾರೆ.

ಕಳೆದ ವರ್ಷವೂ ಚಲನಚಿತ್ರೋತ್ಸವ ಕೆಂಪು ಹಾಸಿನ ಮೇಲೆ ಸೋನಂ ಈ ಉತ್ಪನ್ನದ ಪ್ರತಿನಿಧಿಯಾಗಿ ನಡೆದಿದ್ದರು. ಈ ಇಬ್ಬರೂ ಯಾವ ದಿನ ರೆಡ್ ಕಾರ್ಪೆಟ್ ಮೇಲೆ ನಡೆಯಲಿದ್ದಾರೆ ಎಂಬುದು ಇನ್ನು ನಿಶ್ಚಿತವಾಗಿಲ್ಲ. ಮೇ 11 ರಿಂದ ಮೇ 22 ರವರೆಗೆ 2016ರ ಕಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಜರುಗಲಿದೆ.

ಸೋನಂ ಇತ್ತೀಚೆಗಷ್ಟೇ ರಾಮ್ ಮಾಧ್ವಾನಿ ಅವರ ಬಯೋಪಿಕ್-ಥ್ರಿಲ್ಲರ್ ‘ನೀರ್ಜಾ’ದಲ್ಲಿ ಕಾಣಿಸಿಕೊಂಡಿದ್ದರು. ಐಶ್ವರ್ಯ ಮೇ 20 ರಂದು ಬಿಡುಗಡೆಯಾಗುವ ‘ಸರಬ್ಜಿತ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Write A Comment