ರಾಷ್ಟ್ರೀಯ

ನರಬಲಿಗಾಗಿ ಕದ್ದ 4 ತಿಂಗಳ ಮಗು ರಕ್ಷಣೆ

Pinterest LinkedIn Tumblr

baby

ನವದೆಹಲಿ: ಬಲಿ ಕೊಡಲೆಂದೇ 4 ತಿಂಗಳ ಶಿಶುವನ್ನು ಅಪಹರಣ ಮಾಡಿರುವ ಆಘಾತಕಾರಿ ಸುದ್ದಿ ನವದೆಹಲಿಯ ಈಶಾನ್ಯ ಭಾಗದಲ್ಲಿ ನಡೆದಿದೆ.

ಹೆಣ್ಣುಮಗುವನ್ನು ಅಪಹರಿಸಿದ ಆಕೆಯ ಸೋದರ ಮಾವ ಮಗುವನ್ನು ಮಾಂತ್ರಿಕನೊಬ್ಬನಿಗೆ 40,000 ರೂ.ಗಳಿಗೆ ಮಾರಾಟ ಮಾಡಿದ್ದಾನೆ ಎಂದು ವರದಿಯಾಗಿದೆ.

ಸುದ್ದಿ ತಿಳಿದ ಕೂಡಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ಶಿಶುವನ್ನು ರಕ್ಷಿಸಿದ್ದು, ಅಪಹರಣ ಮಾಡಿದ ಆಕೆ ಮಾವ ಸೇರಿ ಮೂವರನ್ನು ಬಂಧಿಸಿದ್ದಾರೆ.

ಮಗು ಕಾಣೆಯಾದ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಅಪಹರಣಕಾರರಿಂದ ಹೆಣ್ಣುಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಈ ಸಂಬಂಧ ಮಗುವಿನ ಸೋದರ ಮಾವ, ಮಾಂತ್ರಿಕ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.ವಿಚಾರಣೆ ವೇಳೆ ಆರೋಪಿಗಳು ತಾವು ಮಾಡಿದ ಅಪರಾಧ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಈ ಹಿಂದೆಯೂ ಈ ಭಾಗದಲ್ಲಿ ಶಿಶುಗಳನ್ನು ಬಲಿಕೊಡಲೆಂದೇ ಅಪಹರಣ ಮಾಡಿರುವ ಘಟನೆಗಳು ನಡೆದಿವೆ.

Write A Comment