ರಾಷ್ಟ್ರೀಯ

ನೇತಾಜಿ ಕಾರು ಚಾಲಕ ಈಗ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ..!

Pinterest LinkedIn Tumblr

nn

ಅಜಮ್ ಗರ್(ಉತ್ತರ ಪ್ರದೇಶ): ಹಿರಿಯ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ರು ನಿಗೂಢ ಆಧ್ಯಾತ್ಮಿಕ ಗುರು ಗುಮ್ನಾನಿ ಬಾಬಾ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ವದಂತಿಗಳ ನಡುವೆ ಬೋಸ್ ಅವರ ಚಾಲಕ ಕರ್ನಲ್ ನಿಜಾಮುದ್ದೀನ್ ಅಲಿಯಾಸ್ ಸೈಫುದ್ದೀನ್ ಸದ್ಯ ಭೂಮಿ ಮೇಲೆ ಬದುಕಿರುವವರಲ್ಲಿ ಅತ್ಯಂತ ಹಿರಿಯ ವ್ಯಕ್ತಿ ಎಂದು ಸುದ್ದಿಯಾಗಿದ್ದಾರೆ.

Netaji

ಅವರಿಗೀಗ 116ನೇ ವರ್ಷ. ಅವರು ತಮ್ಮ ಪತ್ನಿಯೊಂದಿಗೆ ಬ್ಯಾಂಕ್ ನಲ್ಲಿ ಜಂಟಿ ಖಾತೆ ತೆರೆಯುವ ಮೂಲಕ ಸುದ್ದಿಯಾಗಿದ್ದಾರೆ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅವರು ಖಾತೆ ತೆರೆದಿದ್ದು, ಮತದಾರ ಗುರುತು ಪತ್ರ, ಪಾಸ್ ಪೋರ್ಟ್ ಗಳನ್ನು ಗುರುತು ಸಾಕ್ಷಿಗಾಗಿ ಲಗತ್ತಿಸಿದ್ದಾರೆ. ಅದರಲ್ಲಿ ನಿಜಾಮುದ್ದೀನ್ 1900ನೇ ಇಸವಿಯಲ್ಲಿ ಹುಟ್ಟಿರುವುದಾಗಿ ಇದೆ.

ವಿಶ್ವದಲ್ಲಿಯೇ ಅತ್ಯಂತ ಹಿರಿಯ ವ್ಯಕ್ತಿ ಎಂದು ನಂಬಲಾಗಿದ್ದ ಜಪಾನ್ ನ ವೃದ್ಧರೊಬ್ಬರು 11ನೇ ವರ್ಷದಲ್ಲಿ ಕಳೆದ ಫೆಬ್ರವರಿಯಲ್ಲಿ ಸಾವನ್ನಪ್ಪಿದ್ದರು. ಆದರೆ ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಕರ್ನಲ್ ಭೂಮಿ ಮೇಲೆ ಬದುಕಿರುವವರಲ್ಲಿ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಪತ್ನಿ ಅಜ್ಬುನಿಶಾಗೆ 107 ವರ್ಷವಾಗಿದ್ದು, ದಂಪತಿ ಸ್ಟೇಟ್ ಬ್ಯಾಂಕಿನಲ್ಲಿ ಜಂಟಿ ಖಾತೆ ತೆರೆದಿದ್ದಾರೆ. ಇಷ್ಟೊಂದು ವಯಸ್ಸಾದ ಹಿರಿಯರು ನಮ್ಮ ನೆರೆಹೊರೆಯವರಾಗಿದ್ದಾರೆ ಎಂಬುದು ಸ್ಥಳೀಯರಿಗೆ ಮತ್ತು ಜಿಲ್ಲಾಡಳಿತಕ್ಕೆ ಖುಷಿ ಕೊಟ್ಟಿದೆ.

Write A Comment