ಮನೋರಂಜನೆ

ಜಡೇಜಾ ಮದುವೆ ವೇಳೆ ಗಾಳಿಯಲ್ಲಿ ಗುಂಡು: ಕೆಲ ಕಾಲ ಆತಂಕದ ವಾತಾವರಣ ಆತಂಕ ಸೃಷ್ಠಿ

Pinterest LinkedIn Tumblr

Jadeja-firing

ರಾಜ್ ಕೋಟ್: ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ವಿವಾಹ ಅದ್ಧೂರಿಯಾಗಿ ನೆರವೇರಿದ್ದು, ಸಾಂಪ್ರದಾಯದಂತೆ ಜಡೇಜಾ ಕುದುರೆ ಏರಿ ಬರುತ್ತಿದ್ದ ಸಂದರ್ಭದಲ್ಲಿ ಸಂಬಂಧಿಕನೊರ್ವ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಕೆಲ ಕಾಲ ಆತಂಕದ ವಾತಾವರಣ ಸೃಷ್ಠಿಯಾಗಿತ್ತು.

ರಾಜ್ ಕೋಟ್ ನಲ್ಲಿ ರವೀಂದ್ರ ಜಡೇಜಾ ಗೆಳತಿ ರಿವಾ ಸೋಲಂಕಿರನ್ನು ಬಂಧು ಬಾಂಧವರ ಸಮಾಕ್ಷಮದಲ್ಲಿ ವರಿಸಿದರು. ಸಿಂಗಾರಗೊಂಡಿದ್ದ ಜಡೇಜಾ ಕುದುರೆ ಮೇಲೇರಿ ಬರುತ್ತಿದ್ದ ವೇಳೆ ಸಂಬಂಧಿಕನೊಬ್ಬ ಜಡೇಜಾ ಕುಳಿತಿದ್ದ ಕುದುರೆ ಪಕ್ಕದಲ್ಲೇ ಗಾಳಿಯಲ್ಲಿ ಗುಂಡು ಹಾರಿಸಿದ ಇದರಿಂದ ಬೆದರಿದ ಕುದುರೆ ನಿಂತಲ್ಲೆ ನೆಗೆಯಲು ಶುರು ಮಾಡಿತು. ಕುದುರೆ ಮೇಲೆ ಕುಳಿತ್ತಿದ್ದ ಜಡೇಜಾ ಗಟ್ಟಿಯಾಗಿ ಲಗಾಮು ಹಿಡಿದಿದ್ದರಿಂದ ಕುದುರೆ ನಿಯಂತ್ರಣಕ್ಕೆ ಬಂದಿದೆ. ಒಂದು ವೇಳೆ ಬೆದರಿದ ಕುದುರೆ ಅಡ್ಡಾದಿಡ್ಡಿಯಾಗಿ ಓಡಿದ್ದರೆ ಪರಿಸ್ಥಿತಿ ಬೇರೆಯೇ ಆಗುತ್ತಿತ್ತು.

Write A Comment