ರಾಷ್ಟ್ರೀಯ

ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ಊಟದಲ್ಲಿ ಕಾಂಡೋಮ್ ಪತ್ತೆ !

Pinterest LinkedIn Tumblr

212

ರಾಂಚಿ: ಹೋಟೆಲ್ ನಿಂದ ಆರ್ಡರ್ ಮಾಡಿದ ಊಟದಲ್ಲಿ ಕಾಂಡೋಮ್ ಪತ್ತೆಯಾಗಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ಜೆಮ್‌ಶೆಡ್‌ಪುರದ ಟಾಟಾ ಸ್ಟೀಲ್‌ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳೆ ಆರ್ಡರ್‌ ಮಾಡಿದ ಊಟದಲ್ಲಿ ಕಾಂಡೋಮ್‌ ದೊರೆತಿದೆ. ಈಕೆ ಗ್ರೇವಿಕಾರ್ಟ್‌ಡಾಟ್‌ಕಾಮ್‌ ಎಂಬ ವೆಬ್‌ಸೈಟ್‌ನಲ್ಲಿ, ‘ಸ್ಟ್ರಿಂಗ್‌ ರೋಲ್‌ ದೋಸ’ ಮತ್ತು ‘ಚಿಲ್ಲಿ ಪನೀರ್‌’ ಆರ್ಡರ್‌ ಮಾಡಿದ್ದಾರೆ. ಬೆಳಗ್ಗೆ 9.30ರ ಹೊತ್ತಿಗೆ ಆರ್ಡರ್‌ ಮನೆಗೆ ಬಂದಿದೆ.

ತಿನ್ನಲು ಬಾಕ್ಸ್‌ ತೆರೆದು ನೋಡಿದ ಮಹಿಳೆಗೆ ತಲೆ ತಿರುಗಿ ಬೀಳುವುದೊಂದೇ ಬಾಕಿ. ಯಾಕಂದ್ರೆ ಆ ಊಟದಲ್ಲಿ ಕಾಂಡೋಮ್‌ ಕೂಡ ಇತ್ತು. ”ಬಾಕ್ಸ್‌ ತೆರೆದ ಕೂಡಲೇ ಅದರೊಳಗೊಂದು ಕಾಂಡೋಮ್‌ ಕಂಡುಬಂತು. ಅದನ್ನು ಕಂಡೊಡನೆ ಹೇಸಿಗೆಯಾಯಿತು, ” ಎಂದು ಆ ಮಹಿಳೆ ತಿಳಿಸಿದ್ದಾರೆ.

ಆರ್ಡರ್‌ ಮಾಡಿದ ಊಟವನ್ನು ಮಹಿಳೆ ವಾಪಸ್‌ ಕೊಡಲು ಹೋದಾಗ, ”ನೀವು ಬಾಕ್ಸ್‌ ತೆರೆದು ಅರ್ಧ ಊಟ ತಿಂದಿದ್ದೀರಾ, ವಾಪಸ್‌ ತೆಗೆದುಕೊಳ್ಳಲು ಸಾಧ್ಯವಿಲ್ಲ,” ಎಂದು ಡಿಲಿವರಿ ಬಾಯ್‌ ದಬಾಯಿಸಿದ್ದಾನೆ.

ನಂತರ ಆಕೆ ಆನ್ ಲೈನ್ ನಲ್ಲಿ ಗ್ರೇವಿಕಾರ್ಟ್‌ಡಾಟ್‌ಕಾಮ್‌ ಅನ್ ಲೈಕ್ ಮಾಡುವುದಾಗಿ ಹೇಳಿದ ನಂತರ ಡಿಲಿವರಿ ಹುಡುಗನನ್ನು ಅಮಾನತು ಮಾಡಲಾಗಿದ್ದು, ಆರ್ಡರ್‌ ಮಾಡಿದ ಮಹಿಳೆಯ ಹಣವನ್ನೂ ವಾಪಸ್‌ ಮಾಡಿದ್ದೇವೆ ಎಂದು ಕಂಪನಿ ಮಾಲಿಕ ಶರ್ಮಾ ತಿಳಿಸಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ಈ ಹೋಟೆಲ್ ಆರಂಭವಾಗಿದ್ದು, ಇಲ್ಲಿಯವರೆಗೂ ಯಾವ ರೀತಿಯ ದೂರುಗಳು ಬಂದಿರಲ್ಲಿಲ್ಲ. ಇದೇ ಮೊದಲ ಪ್ರಕರಣ ಎಂದಿರುವ ಅವರು ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ.

Write A Comment