ಮನೋರಂಜನೆ

ಗಂಭೀರ್ ಅಬ್ಬರಕ್ಕೆ ಸೋತ ಸನ್‌ರೈಸರ್ಸ್ ಹೈದರಾಬಾದ್ ! ಕೆಆರ್‌ಗೆ 8 ವಿಕೆಟ್‌ಗಳ ಜಯ

Pinterest LinkedIn Tumblr

gautam-gambhir

ಹೈದರಾಬಾದ್ : ಎಡಗೈ ಬ್ಯಾಟ್ಸ್‌ಮನ್ ಗೌತಮ್‌ ಗಂಭೀರ್ ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಶನಿವಾರ ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 8 ವಿಕೆಟ್‌ಗಳಿಂದ ಜಯಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ತಂಡವು ಬೃಹತ್ ಮೊತ್ತ ಪೇರಿಸಲಿಲ್ಲ. ಉಮೇಶ್ ಯಾದವ್ (28ಕ್ಕೆ3) ಮತ್ತು ಮಾರ್ನೆ ಮಾರ್ಕೆಲ್ (35ಕ್ಕೆ2) ಅವರ ದಾಳಿಗೆ ಕುಸಿಯಿತು. ಇದರಿಂದಾಗಿ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 142 ರನ್‌ ಗಳಿಸುವಲ್ಲಿ ಮಾತ್ರ ಸಫಲವಾಯಿತು.

ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ (ಔಟಾಗದೆ 90; 60ಎ, 13ಬೌಂ, 1ಸಿ) ಮತ್ತು ರಾಬಿನ್ ಉತ್ತಪ್ಪ (38; 60ಎ, 3ಬೌಂ, 1ಸಿ) ಅವರ ಮೊದಲ ವಿಕೆಟ್‌ ಜೊತೆಯಾಟದ ಬಲದಿಂದ ಕೆಕೆಆರ್ ತಂಡವು ಇನಿಂಗ್ಸ್‌ನಲ್ಲಿ ಇನ್ನೂ 10 ಎಸೆತಗಳು ಬಾಕಿಯಿರುವಂತೆಯೇ ಜಯಶಾಲಿಯಾಯಿತು.

150ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ಗಳನ್ನು ಗಳಿಸಿದ ಗಂಭೀರ್ ಆತಿಥೇಯ ಬೌಲರ್‌ಗಳ ಬೆವರಿಳಿಸಿದರು. ಆಕರ್ಷಕ ಡ್ರೈವ್‌ಗಳು, ಲಾಫ್ಟ್‌ಗಳ ಮೂಲಕ ಗಮನ ಸೆಳೆದ ಗಂಭೀರ್ ತಂಡವನ್ನು ಜಯದ ಗೆರೆ ಮುಟ್ಟಿಸಿದರು.

ಆತಿಥೇಯ ತಂಡದ ಪರ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಎಯಾನ್ ಮಾರ್ಗನ್ (51; 43ಎ, 3ಬೌಂ, 2ಸಿ) ಮತ್ತು ನಮನ್ ಓಜಾ (37; 28ಎ, 2ಬೌಂ, 2ಸಿ) ಬ್ಯಾಟಿಂಗ್‌ನಲ್ಲಿ ಉಪಯುಕ್ತ ಕಾಣಿಕೆ ನೀಡಿದರು. ಉಳಿದ ಬ್ಯಾಟ್ಸ್‌ಮನ್‌ಗಳು ಮಿಂಚಲಿಲ್ಲ.

ಸನ್‌ರೈಸರ್ಸ್‌ ತಂಡವು ತನ್ನಮೊದಲ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಸೋತಿತ್ತು. ಇದೀಗ ಎರಡನೇ ಪಂದ್ಯದಲ್ಲಿಯೂ ಸೋತಿದೆ.

ಚಿತ್ರನಟ ಶಾರೂಕ್‌ ಖಾನ್ ಮಾಲೀಕತ್ವದ ಕೋಲ್ಕತ್ತ ತಂಡವು ಆಡಿರುವ ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿದೆ.

ಸ್ಕೋರ್‌ಕಾರ್ಡ್‌
ಸನ್‌ರೈಸರ್ಸ್ ಹೈದರಾಬಾದ್ 7 ಕ್ಕೆ 142 (20 ಓವರ್‌ಗಳಲ್ಲಿ)

ಡೇವಿಡ್ ವಾರ್ನರ್ ಸಿ ಸೂರ್ಯಕುಮಾರ್ ಬಿ ಉಮೇಶ್ ಯಾದವ್ 13
ಶಿಖರ್ ಧವನ್ ಸಿ ರಾಬಿನ್ ಉತ್ತಪ್ಪ ಬಿ ಮಾರ್ನೆ ಮಾರ್ಕೆಲ್ 06
ಮೊಸೆಸ್ ಹೆನ್ರಿಕ್ಸ್ ಎಲ್‌ಬಿಡಬ್ಲ್ಯು ಉಮೇಶ್ ಯಾದವ್ 06
ಎಯಾನ್ ಮಾರ್ಗನ್ ಸಿ ಶಕೀಬ್ ಅಲ್ ಹಸನ್ ಬಿ ಉಮೇಶ್ ಯಾದವ್ 51
ದೀಪಕ್ ಹೂಡಾ ಸಿ ಉಮೇಶ್ ಯಾದವ್ ಬಿ ಆ್ಯಂಡ್ರೆ ರಸೆಲ್ 06
ನಮನ್ ಓಜಾ ಸಿ ಪಿಯೂಷ್ ಚಾವ್ಲಾ ಬಿ ಮಾರ್ನೆ ಮಾರ್ಕೆಲ್ 37
ಆಶಿಶ್ ರೆಡ್ಡಿ ರನ್‌ಔಟ್ (ಶಕೀಬ್/ ಉತ್ತಪ್ಪ) 13
ಕರಣ್ ಶರ್ಮಾ ಔಟಾಗದೆ 02
ಭುವನೇಶ್ವರ್ ಕುಮಾರ್ ಔಟಾಗದೆ 00
ಇತರೆ: (ಬೈ1, ಲೆಗ್‌ಬೈ 2, ವೈಡ್ 4, ನೋಬಾಲ್ 1) 08
ವಿಕೆಟ್‌ ಪತನ: 1–18 (ಧವನ್; 2.4), 2–23 (ವಾರ್ನರ್; 3.2), 3–36 (ಹೆನ್ರಿಕ್ಸ್; 5.6), 4–50 (ಹೂಡಾ; 9.4), 5–117 (ಓಜಾ; 17.3), 6–128 (ಮಾರ್ಗನ್; 18.4), 7–141 (ರೆಡ್ಡಿ;19.5)
ಬೌಲಿಂಗ್‌: ಮಾರ್ನೆ ಮಾರ್ಕೆಲ್ 4–0–35–2 (ನೋಬಾಲ್ 1, ವೈಡ್ 3), ಉಮೇಶ್ ಯಾದವ್ 4–0–28–3 (ವೈಡ್ 1), ಶಕೀಬ್ ಅಲ್ ಹಸನ್ 3–0–18–0, ಆ್ಯಂಡ್ರೆ ರಸೆಲ್ 4–0–19–1, ಸುನಿಲ್ ನಾರಾಯಣ್ 4–0–26–0, ಪಿಯೂಷ್ ಚಾವ್ಲಾ 1–0–13–0

ಕೋಲ್ಕತ್ತ ನೈಟ್ ರೈಡರ್ಸ್ 2 ಕ್ಕೆ 146 (18.2 ಓವರ್‌ಗಳಲ್ಲಿ)

ರಾಬಿನ್ ಉತ್ತಪ್ಪ ಎಲ್‌ಬಿಡಬ್ಲ್ಯು ಬಿ ಆಶಿಶ್ ರೆಡ್ಡಿ 38
ಗೌತಮ್ ಗಂಭೀರ್ ಔಟಾಗದೆ 90
ಆ್ಯಂಡ್ರೆ ರಸೆಲ್ ಬಿ ಮುಸ್ತಫಿಜರ್ ರೆಹಮಾನ್ 02
ಮನೀಶ್ ಪಾಂಡೆ ಔಟಾಗದೆ 11
ಇತರೆ: (ವೈಡ್ 5) 05
ವಿಕೆಟ್‌ ಪತನ:ವಿಕೆಟ್ ಪತನ: 1–92 (ಉತ್ತಪ್ಪ; 12.3), 2–97 (ರಸೆಲ್; 13.4).
ಬೌಲಿಂಗ್‌: ಭುವನೇಶ್ವರ ಕುಮಾರ್ 4–0–29–0 (ವೈಡ್ 1), ಬರೀಂದರ್ ಸ್ರಾನ್ 4–0–31–0 (ವೈಡ್ 2), ಮುಸ್ತಫಿಜರ್ ರೆಹಮಾನ್ 4–0–29–1 (ವೈಡ್ 1), ಕರಣ್ ಶರ್ಮಾ 2.2–0–24–0, ಮೊಸೆಸ್ ಹೆನ್ರಿಕ್ಸ್ 2–0–19–0 (ವೈಡ್ 1), ಆಶಿಶ್ ರೆಡ್ಡಿ 2–0–14–1

ಫಲಿತಾಂಶ: ಕೋಲ್ಕತ್ತ ನೈಟ್ ರೈಡರ್ಸ್‌ ತಂಡಕ್ಕೆ 8 ವಿಕೆಟ್‌ಗಳ ಜಯ.
ಪಂದ್ಯಶ್ರೇಷ್ಠ: ಗೌತಮ್ ಗಂಭೀರ್.

Write A Comment