ಮನೋರಂಜನೆ

ಮುಂಬೈ ಇಂಡಿಯನ್ಸ್ ಎದುರು ರೋಚಕ ಜಯ ಸಾಧಿಸಿದ ಗುಜರಾತ್‌ ಲಯನ್ಸ್‌

Pinterest LinkedIn Tumblr

finch

ಮುಂಬೈ : ಆ್ಯರನ್ ಫಿಂಚ್ ಅವರ ಛಲದ ಆಟದ ಬಲದಿಂದ ಶನಿವಾರ ರಾತ್ರಿ ಗುಜರಾತ್ ಲಯನ್ಸ್ ತಂಡವು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಎದುರು 3 ವಿಕೆ ಟ್‌ಗಳಿಂದ ರೋಚಕ ಜಯ ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡವು ನೀಡಿದ್ದ 143 ರನ್‌ಗಳ ಸಾಧಾರಣ ಗುರಿಯನ್ನು ತಲುಪಲು ಗುಜರಾತ್ ಹರಸಾಹಸ ಪಡಬೇಕಾಯಿತು. ಕೊನೆಯ ಎಸೆತದವರೆಗೂ ಹೋರಾಟ ನಡೆಸಿದ ಫಿಂಚ್ (ಔಟಾಗದೆ 67; 54ಎ, 7ಬೌಂ, 1ಸಿ) ಜಯದ ಕಾಣಿಕೆ ನೀಡಿದರು.

ಮುಂಬೈ ತಂಡದ ಎಡಗೈ ಮಧ್ಯಮವೇಗಿ ಮಿಷೆಲ್ ಮೆಕ್‌ಲೆನಗಾನ್ (21ಕ್ಕೆ4) ಅಮೋಘ ಬೌಲಿಂಗ್‌ನಿಂದಾಗಿ ಲಯನ್ಸ್‌ಗೆ ಸೋಲಿನ ಭೀತಿ ಎದುರಾ ಗಿತ್ತು. ಇದರಿಂದಾಗಿ ವಾಂಖೆಡೆ ಕ್ರೀಡಾಂ ಗಣದಲ್ಲಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರು ರೋಚಕತೆಯ ಕಡಲಲ್ಲಿ ಈಜಿದರು. ಆದರೆ, ಆತಿಥೇಯ ತಂಡದ ಜಯ ಕಣ್ತುಂಬಿಕೊಳ್ಳುವ ಅವಕಾಶ ಅವರಿಗೆ ಸಿಗಲಿಲ್ಲ.

ಕೊನೆಯ ಓವರ್‌ನಲ್ಲಿ ಲಯನ್ಸ್‌ಗೆ ಜಯಿಸಲು 11 ರನ್‌ಗಳನ್ನು ಗಳಿಸುವ ಅವಶ್ಯಕತೆ ಇತ್ತು. ಆ ಓವರ್ ಬೌಲಿಂಗ್‌ ಮಾಡಿದ ಜಸ್‌ಪ್ರೀತ್ ಬೂಮ್ರಾ ಬ್ಯಾಟ್ಸ್‌ ಮನ್‌ಗಳನ್ನು ನಿಯಂತ್ರಿಸುವಲ್ಲಿ ವಿಫಲ ರಾದರು. ಧವಳ್ ಕುಲಕರ್ಣಿ ಮತ್ತು ಫಿಂಚ್ ತಂಡವನ್ನು ಗೆಲುವಿನ ದಡ ಸೇರಿ ಸುವಲ್ಲಿ ಯಶಸ್ವಿಯಾದರು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ರೈನಾ ಬಳಗವು ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುವಲ್ಲಿ ಸಫಲವಾಯಿತು.

ಮಧ್ಯಮವೇಗಿ ಧವಳ್ ಕುಲಕರ್ಣಿ (19ಕ್ಕೆ2) ಮತ್ತು ಸ್ಪಿನ್ನರ್ ಪ್ರವೀಣ್ ತಾಂಬೆ (12ಕ್ಕೆ2) ಅವರ ಚುರುಕಿನ ಬೌಲಿಂಗ್‌ನಿಂದಾಗಿ ಮುಂಬೈ ಇಂಡಿ ಯನ್ಸ್‌ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 143 ರನ್ ಗಳಿಸಿತ್ತು.

ಆರಂಭಿಕ ಕುಸಿತ ಕಂಡ ತಂಡಕ್ಕೆ ಪಾರ್ಥಿವ್ ಪಟೇಲ್ (38 ರನ್) ಅಂಬಟಿ ರಾಯುಡು, ಟಿಮ್ ಸೌಥಿ, ಆಸರೆಯಾದರು. ಹೀಗಾಗಿ ತಂಡ ನೂರರ ಗಡಿ ದಾಟಲು ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರ್:
ಮುಂಬೈ ಇಂಡಿ ಯನ್ಸ್‌ : 20 ಓವರ್‌ಗಳಲ್ಲಿ 8 ವಿಕೆಟ್‌ಗೆ 143 (ಪಾರ್ಥೀವ್ ಪಟೇಲ್ 34, ಟಿಮ್ ಸೌಥಿ 25, ಧವಳ್ ಕುಲಕರ್ಣಿ 19ಕ್ಕೆ2, ಪ್ರವೀಣ್ ತಾಂಬೆ 12ಕ್ಕೆ2) .

ಗುಜರಾತ್ ಲಯನ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 147(ಫಿಂಚ್ ಔಟಾಗದೆ 63, ಸುರೇಶ್ ರೈನಾ 27, ಧವಳ್ ಕುಲಕರ್ಣಿ ಔಟಾಗದೆ 6, ಜಸ್‌ಪ್ರೀತ್ ಬೂಮ್ರಾ 28ಕ್ಕೆ2, ಮಿಷೆಲ್ ಮೆಕ್ಲೆಂಗಾನ್ 21ಕ್ಕೆ4)

ಫಲಿತಾಂಶ: ಗುಜರಾತ್‌ ಲಯನ್ಸ್‌ಗೆ 3 ವಿಕೆಟ್‌ಗಳ ಜಯ.
ಪಂದ್ಯಶ್ರೇಷ್ಠ: ಆ್ಯರನ್‌ ಫಿಂಚ್‌.

Write A Comment