ರಾಷ್ಟ್ರೀಯ

ಭಾರತದಲ್ಲಿ ಅಸಹಿಷ್ಣುತೆ ಇಲ್ಲ : ಅರುಣ್ ಜೇಟ್ಲಿ

Pinterest LinkedIn Tumblr

aruವಾಷಿಂಗ್ಟನ್ ,ಏ.16- ಒಂದೆರಡು ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದಿರಬಹುದಾದರೂ ಅಷ್ಟಕ್ಕೆ ದೇಶದಲ್ಲಿ ಅಸಹಿಷ್ಣುತೆ(ಇಂಟಾಲರೆನ್ಸ್) ಇದೆ ಎಂದು ಹೇಳಲಾಗದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಭಾರತದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ವಿಷಯ. ಭಾರತದಂತಹ ಒಂದು ಬೃಹತ್ ರಾಷ್ಟ್ರದಲ್ಲಿ ಇಂತಹ ಸಣ್ಣಪಟ್ಟು ಘಟನೆಗಳು ಸಾಮಾನ್ಯ. ಅಂತಹ ಕೆಲವು ಪ್ರಕರಣಗಳನನೇ ದೊಡ್ಡದು ಮಾಡಿ, ಅಸಹಿಷ್ಣತೆ ಬಣ್ಣ ಹಚ್ಚುವುದು ಸರಿಯಲ್ಲ ಎಂದು ಜೇಟ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ನಡೆಯುತ್ತಿರುವ ಕೆಲವು ನಿರ್ದಿಷ್ಟ ಘಟನೆಗಳ ಬಗ್ಗೆ ಮಾಧ್ಯಮಗಳು ಗಮನ ಸೆಳೆದಾಗ ಜೇಟ್ಲಿ ಈ ಹೇಳಿಕೆ ನೀಡಿದರು.

Write A Comment