ಅಂತರಾಷ್ಟ್ರೀಯ

ಇಳಿಕೆಯತ್ತ ಮುಖ ಮಾಡಿದ ಕಚ್ಛಾತೈಲ; ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯತೆ; ದೋಹಾದಲ್ಲಿ ಭಾನುವಾರ ತೈಲೋತ್ಪಾದಕ ಸಂಸ್ಥೆಗಳ ಮಹತ್ವದ ಸಭೆ, 18 ದೇಶಗಳ ಪ್ರತಿನಿಧಿಗಳು ಭಾಗಿ

Pinterest LinkedIn Tumblr

petrol-aaa

ದುಬೈ: ಇತ್ತೀಚೆಗಷ್ಟೇ 74 ಪೈಸೆಯಷ್ಟು ಇಳಿಕೆ ಕಂಡಿದ್ದ ಪೆಟ್ರೋಲ್ ದರ ಮತ್ತೆ ಇಳಿಕೆಯಾಗುವ ಮುನ್ಸೂಚನೆ ದೊರೆತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದರ ಇಳಿಕೆ ಕಂಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾತೈಲಕ್ಕೆ ಬೇಡಿಕೆ ಕುಸಿದಿದ್ದು, ಪ್ರತಿ ನಿತ್ಯದ ಜಾಗತಿಕ ಸರಬರಾಜಿನ ಬೇಡಿಕೆಯಲ್ಲಿ 0.3 ಮಿಲಿಯನ್ ಬ್ಯಾರೆಲ್ ಕಡಿತವಾಗಿದೆ. ಮಾರ್ಚ್ ಬಳಿಕ ಪ್ರತಿನಿತ್ಯ ಜಾಗತಿಕ ಮಾರುಕಟ್ಟೆಯಲ್ಲಿ ಕೇವಲ 96.1 ಮಿಲಿಯನ್ ಬ್ಯಾರೆಲ್ ತೈಲ ಮಾತ್ರ ಸರಬರಾಜಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಪ್ರತೀ ಬ್ಯಾರೆಲ್ ತೈಲ ದರದಲ್ಲಿ 1.14 ಡಾಲರ್ ನಷ್ಟು ಮೌಲ್ಯ ಕುಸಿದಿದ್ದು, ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲ್ ತೈಲ 40.36 ಡಾಲರ್ ಗೆ ಮಾರಾಟವಾಗುತ್ತಿದೆ. ಲಂಡನ್ ಮಾರುಕಟ್ಟೆಯಲ್ಲಿಯೂ ಕೂಡ 0.74 ಡಾಲರ್ ನಷ್ಟು ಮೌಲ್ಯ ಕುಸಿದಿದ್ದು, ಪ್ರತೀ ಬ್ಯಾರೆಲ್ ಕಚ್ಛಾತೈಲ 43.01ಕ್ಕೆ ಮಾರಾಟವಾಗುತ್ತಿದೆ ಎಂದು ತಿಳಿದುಬಂದಿದೆ.

ನಾದೇ ಭಾನುವಾರ ಖತಾರ್ ನ ದೋಹಾದಲ್ಲಿ ಅಂತಾರಾಷ್ಟ್ರೀಯ ತೈಲೋತ್ಪಾದಕರ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ತೈಲೋತ್ಪಾದನೆ ಮಾಡುವ ಸುಮಾರು 18 ದೇಶಗಳು ಪಾಲ್ಗೊಳ್ಳುತ್ತಿವೆ. ಇನ್ನು ಸಭೆಯಲ್ಲಿ ತೈಲದರ ಇಳಿಕೆಯೇ ಚರ್ಚೆಯ ಪ್ರಮುಖ ವಿಚಾರವಾಗಿರಲಿದ್ದು, ಮಾರಾಟ ಹೆಚ್ಚಳಕ್ಕೆ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಇರಾನ್ ಸರ್ಕಾರ ಈಗಗಾಲೇ ತನ್ನ ತೈಲೋತ್ಪಾದನೆಯನ್ನು ನಿಯಮಿತಗೊಳಿಸಿಕೊಂಡಿದ್ದು, ಈ ಹಿಂದಿನ ಗುರಿಗಳನ್ನು ಸಾಧಿಸದ ಹೊರತು ಹೊಸ ಮಾರಾಟ ಗುರಿಗಳನ್ನು ಹೊಂದುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾತೈಲ ದರ ಇಳಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಭಾರತದಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಇಳಿಕೆಯಾಗುವ ಸಾಧ್ಯತೆಗಳಿವೆ. ಇತ್ತೀಚೆಗಷ್ಟೇ ಪೆಟ್ರೋಲ್ ದರದಲ್ಲಿ 74 ಪೈಸೆ ಮತ್ತು ಡೀಸೆಲ್ ದರದಲ್ಲಿ 1.30 ಪೈಸೆಯಷ್ಟು ಇಳಿಕೆಯಾಗಿತ್ತು.

Write A Comment