ಕನ್ನಡ ವಾರ್ತೆಗಳು

ಸರಣಿ ಕಳ್ಳತನ : ಕಿಟಕಿ ಮುರಿದು ಒಳ ನುಗ್ಗಿದ ಕಳ್ಳರು

Pinterest LinkedIn Tumblr

vittal_house_thefet

ವಿಟ್ಲ, ಏ.16 : ವಿಟ್ಲ ಠಾಣಾ ವ್ಯಾಪ್ತಿಯ ನೆಟ್ಲಮುಡ್ನೂರು ಗ್ರಾಮದಲ್ಲಿ ಸರಣಿ ಕಳ್ಳತನ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

ನೇರಳಕಟ್ಟೆ-ಗಣೇಶನಗರ ನಿವಾಸಿ ಉಮ್ಮರ್ ಎಂಬವರ ಮನೆಯ ಕಿಟಕಿ ರಾಡನ್ನು ಬಗ್ಗಿಸಿ ಒಳ ನುಗ್ಗಿದ ಕಳ್ಳರು ಕೋಣೆಯೊಳಗಿದ್ದ 2 ಕಪಾಟುಗಳನ್ನು ಮುರಿದು ಕಪಾಟಿನಲ್ಲಿದ್ದ 35 ಸಾವಿರ ರೂಪಾಯಿ ನಗದು, ಒಂದೂವರೆ ಪವನ್ ತೂಕದ ಚಿನ್ನದ ಬೆಂಡೋಲೆ, 1 ಟಾರ್ಚ್ ಲೈಟ್, ಒಂದು ಹೊಸ ಪ್ಯಾಂಟ್ ಮತ್ತು ಶರ್ಟ್ ಹಾಗೂ ಸುಗಂಧ ದ್ರವ್ಯಗಳನ್ನು ಕಳವುಗೈದಿರುವುದಾಗಿ ಮನೆಯ ಮಾಲಕ ಉಮ್ಮರ್ ತಿಳಿಸಿದ್ದಾರೆ.

ಕೊಡಾಜೆ-ಪಂತಡ್ಕ ನಿವಾಸಿ ಅಬ್ದುಲ್ ಖಾದರ್ ಎಂಬವರ ಮನೆಗೂ ನುಗ್ಗಿದ ಕಳ್ಳರು ಕಪಾಟಿನಲ್ಲಿ ಹುಡುಕಾಟ ನಡೆಸಿದ್ದು, 1,500/- ರೂಪಾಯಿ ನಗದು ಹಣವನ್ನು ಕಳವುಗೈದಿದ್ದಾರೆ.

ಶಾಲೆ ಹಾಗೂ ಮದ್ರಸಗಳಿಗೆ ರಜೆಯ ಹಿನ್ನಲೆಯಲ್ಲಿ ಗುರುವಾರ ನೆಂಟರ ಮನೆಗೆ ತೆರಳಿದ್ದ ೨ ಮನೆಗಳಲ್ಲಿ ಯಾರೂ ಇರಲಿಲ್ಲ. ಶುಕ್ರವಾರ ಮನೆಗೆ ಬಂದಾಗ ಕಳವಾಗಿರುವ ಬಗ್ಗೆ ತಿಳಿದು ಬಂದಿದೆ. ಎರಡೂ ಮನೆಗಳಲ್ಲೂ ಕಿಟಕಿಯ ರಾಡ್‌ಗಳನ್ನು ಬಗ್ಗಿಸಿ ಒಳನುಗ್ಗಿರುವುದು ಕಂಡು ಬಂದಿದ್ದು ಈ ಎರಡು ಕೃತ್ಯಗಳನ್ನು ಒಂದೇ ತಂಡದವರು ನಡೆಸಿರಬಹುದು ಎಂದು ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ವಿಟ್ಲ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Write A Comment