
ಕೋಲ್ಕತ್ತ : ಮುಂಬೈ ಇಂಡಿಯನ್ಸ್ತಂಡದ ನಾಯಕ ರೋಹಿತ್ಶರ್ಮಾ (ಔಟಾಗದೆ 84; 54ಎ, 10ಬೌಂ, 2ಸಿ) ಬುಧವಾರ ಈಡನ್ಗಾರ್ಡನ್ಸ್ಅಂಗಳದಲ್ಲಿ ರನ್ಮಳೆ ಸುರಿಸಿದರು.
ರೋಹಿತ್ದಾಖಲಿಸಿದ ಆಕರ್ಷಕ ಅರ್ಧಶತಕದ ಬಲದಿಂದ ಮುಂಬೈ ಇಂಡಿಯನ್ಸ್ತಂಡ ಕೋಲ್ಕತ್ತ ನೈಟ್ರೈಡರ್ಸ್ತಂಡವನ್ನು 6 ವಿಕೆಟ್ಗಳಿಂದ ಮಣಿಸಿತು. ಇದರೊಂದಿಗೆ ಈ ಬಾರಿಯ ಐಪಿಎಲ್ಟೂರ್ನಿಯಲ್ಲಿ ಮೊದಲ ಗೆಲುವಿನ ಸಿಹಿ ಸವಿದಿದೆ.
ಟಾಸ್ಸೋತರೂ ಮೊದಲು ಬ್ಯಾಟ್ಮಾಡಲು ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡ ನೈಟ್ರೈಡರ್ಸ್ತಂಡ 20 ಓವರ್ಗಳಲ್ಲಿ 5 ವಿಕೆಟ್ಗೆ 187ರನ್ಪೇರಿಸಿತು.

ಈ ಗುರಿಯನ್ನು ಮುಂಬೈ ಇಂಡಿಯನ್ಸ್19.1 ಓವರ್ಗಳಲ್ಲಿ 4 ವಿಕೆಟ್ಕಳೆದುಕೊಂಡು ತಲುಪಿತು.
ದಿಟ್ಟ ಆರಂಭ: ಇನಿಂಗ್ಸ್ಆರಂಭಿಸಿದ ಮುಂಬೈಗೆ ರೋಹಿತ್ಮತ್ತು ವಿಕೆಟ್ಕೀಪರ್ಬ್ಯಾಟ್ಸ್ಮನ್ಪಾರ್ಥಿವ್ಪಟೇಲ್(23; 20ಎ, 4ಬೌಂ) ಉತ್ತಮ ಅಡಿಪಾಯ ಹಾಕಿಕೊಟ್ಟರು.
ಈ ಜೋಡಿ ಮೊದಲ ವಿಕೆಟ್ಗೆ 35 ಎಸೆತಗಳಲ್ಲಿ 53ರನ್ಕಲೆಹಾಕಿ ನೈಟ್ರೈಡರ್ಸ್ಬೌಲರ್ಗಳನ್ನು ಕಾಡಿತು. ಆರನೇ ಓವರ್ನ ಐದನೇ ಎಸೆತದಲ್ಲಿ ಪಾರ್ಥಿವ್ರನ್ಔಟ್ಆಗಿದ್ದರಿಂದ ಈ ಜತೆಯಾಟಕ್ಕೆ ತೆರೆ ಬಿತ್ತು. ಹಾರ್ದಿಕ್ಪಾಂಡ್ಯ (9) ಬಂದಷ್ಟೇ ವೇಗವಾಗಿ ಪೆವಿಲಿಯನ್ಸೇರಿಕೊಂಡಿದ್ದರಿಂದ ಮುಂಬೈ ಆತಂಕಕ್ಕೆ ಒಳಗಾಗಿತ್ತು.
ಇದರಿಂದ ಕಿಂಚಿತ್ತೂ ವಿಚಲಿತ ರಾಗದ ರೋಹಿತ್ಅಮೋಘ ಇನಿಂಗ್ಸ್ಕಟ್ಟಿ ಆತಿಥೇಯ ನೈಟ್ರೈಡರ್ಸ್ತಂಡದ ಗೆಲುವಿನ ಕನಸನ್ನು ನುಚ್ಚು ನೂರು ಮಾಡಿದರು.
ರೋಹಿತ್, ಮಿಷೆಲ್ಮೆಕ್ಲೆ ನಾಗನ್(20; 8ಎ, 3ಸಿ) ಮತ್ತು ಜಾಸ್ಬಟ್ಲರ್(41; 22ಎ, 3ಬೌಂ, 3ಸಿ) ಅವ ರೊಂದಿಗೆ ಎರಡು ಅಮೂಲ್ಯ ಜತೆ ಯಾಟ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಅಬ್ಬರ: ಮೊದಲು ಬ್ಯಾಟ್ಮಾಡಿದ ನೈಟ್ರೈಡರ್ಸ್ಗೆ ಆರಂಭಿಕ ಬ್ಯಾಟ್ಸ್ಮನ್ರಾಬಿನ್ ಉತ್ತಪ್ಪ (8) ಕೈ ಕೊಟ್ಟರು. ಆದರೆ, ಗಂಭೀರ್ ಕೇವಲ 52 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ಸೇರಿದಂತೆ 64 ರನ್ ಕಲೆ ಹಾಕಿದರು. ಇವರ ಆಟಕ್ಕೆ ಬೆಂಬಲ ನೀಡಿದ ಸ್ಫೋಟಕ ಬ್ಯಾಟ್ಸ್ಮನ್ ಮನೀಷ್ಕೂಡ ಚಾಂಪಿಯನ್ತಂಡದ ಬೌಲರ್ಗಳ ಬೆವರಿಳಿಸಿದರು.
ಬಲಗೈ ಬ್ಯಾಟ್ಸ್ಮನ್ಮನೀಷ್ಕೇವಲ 29 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ ಸೇರಿದಂತೆ 52 ರನ್ ಬಾರಿಸಿದರು. ಈ ಜೋಡಿ ಎರಡನೇ ವಿಕೆಟ್ಗೆ ಬರೋ ಬ್ಬರಿ ಹತ್ತು ಓವರ್ ಕ್ರೀಸ್ನಲ್ಲಿದ್ದು ನೂರು ರನ್ಗಳನ್ನು ಕಲೆ ಹಾಕಿತು.
ಇದರಿಂದ ನೈಟ್ ರೈಡರ್ಸ್ ತಂಡಕ್ಕೆ ಸವಾಲಿನ ಮೊತ್ತ ಕಲೆ ಹಾಕಲು ಸಾಧ್ಯವಾಯಿತು. ಕೊನೆಯಲ್ಲಿ ಆ್ಯಂಡ್ರೆ ರಸೆಲ್ಅಬ್ಬರಿಸಿದರು. 17 ಎಸೆತಗಳಲ್ಲಿ 36 ರನ್ ಗಳಿಸಿದ ರಸೆಲ್ತಂಡದ ಮೊತ್ತ ಹಿಗ್ಗಿಸಿದರು.
ಸ್ಕೋರ್ಕಾರ್ಡ್
ಕೋಲ್ಕತ್ತ ನೈಟ್ರೈಡರ್ಸ್ 5 ಕ್ಕೆ 187 (20 ಓವರ್ಗಳಲ್ಲಿ)
ರಾಬಿನ್ಉತ್ತಪ್ಪ ಸಿ ಕೀರನ್ಪೊಲಾರ್ಡ್ಬಿ ಮಿಷೆಲ್ಮೆಕ್ಲೆನಾಗನ್ 08
ಗೌತಮ್ಗಂಭೀರ್ಸಿ ಪಾರ್ಥಿವ್ಪಟೇಲ್ಬಿ ಹಾರ್ದಿಕ್ಪಾಂಡ್ಯ 64
ಮನೀಷ್ಪಾಂಡೆ ಸಿ ಮತ್ತು ಬಿ ಹರಭಜನ್ಸಿಂಗ್ 52
ಆ್ಯಂಡ್ರೆ ರಸೆಲ್ಬಿ ಮಿಷೆಲ್ಮೆಕ್ಲೆನಾಗನ್ 36
ಯೂಸೂಫ್ಪಠಾಣ್ಔಟಾಗದೆ 09
ಕಾಲಿನ್ಮನ್ರೊ ರನ್ಔಟ್(ಸೌಥಿ/ಪಾರ್ಥಿವ್ಪಟೇಲ್) 04
ಸೂರ್ಯಕುಮಾರ್ಯಾದವ್ಔಟಾಗದೆ 04
ಇತರೆ: (ಲೆಗ್ಬೈ 3, ವೈಡ್7) 10
ವಿಕೆಟ್ಪತನ: 1–21(ಉತ್ತಪ್ಪ; 3.4 ಓವರ್), 2–121 (ಮನೀಷ್; 13.4), 3–164 (ರಸೆಲ್; 17.2), 4–170 (ಗಂಭೀರ್; 18.1), 5–183 (ಮನ್ರೊ; 19.5).
ಬೌಲಿಂಗ್: ಟಿಮ್ಸೌಥಿ 4–0–43–0, ಜಸ್ಪ್ರೀತ್ಬೂಮ್ರಾ 4–0–32–0, ಮಿಷೆಲ್ಮೆಕ್ಲೆನಾಗನ್4–0–25–2, ಹಾರ್ದಿಕ್ಪಾಂಡ್ಯ 2–0–22–1, ಹರಭಜನ್ಸಿಂಗ್4–0–31–1, ಜೆ. ಸುಚಿತ್2–0–31–0.
ಮುಂಬೈ ಇಂಡಿಯನ್ಸ್ 4 ಕ್ಕೆ 188 (19.1 ಓವರ್ಗಳಲ್ಲಿ)
ರೋಹಿತ್ಶರ್ಮಾ ಔಟಾಗದೆ 84
ಪಾರ್ಥಿವ್ಪಟೇಲ್ರನ್ಔಟ್(ಬ್ರಾಡ್ಹಾಗ್/ಉತ್ತಪ್ಪ) 23
ಹಾರ್ದಿಕ್ಪಾಂಡ್ಯ ಸಿ ಮನೀಷ್ಪಾಂಡೆ ಬಿ ಪಿಯೂಷ್ಚಾವ್ಲಾ 09
ಮಿಷೆಲ್ಮೆಕ್ಲೆನಾಗನ್ಸಿ ಕಾಲಿನ್ಮನ್ರೊ ಬಿ ಕುಲದೀಪ್ಯಾದವ್ 20
ಜಾಸ್ಬಟ್ಲರ್ಸಿ ಯಾದವ್ಬಿ ಆ್ಯಂಡ್ರೆ ರಸೆಲ್ 41
ಕೀರನ್ಪೊಲಾರ್ಡ್ಔಟಾಗದೆ 01
ಇತರೆ: (ಬೈ 1, ಲೆಗ್ಬೈ 1, ವೈಡ್8) 10
ವಿಕೆಟ್ಪತನ: 1–53 (ಪಾರ್ಥಿವ್; 5.5ಓವರ್), 2–87 (ಪಾಂಡ್ಯ; 10.1), 3–109 (ಮೆಕ್ಲೆನಾಗನ್; 11.5), 4–175 (ಬಟ್ಲರ್; 18.3).
ಬೌಲಿಂಗ್: ಆ್ಯಂಡ್ರೆ ರಸೆಲ್4–0–52–1, ಜಾನ್ಹಾಸ್ಟಿಂಗ್ಸ್4–0–31–0, ಬ್ರಾಡ್ಹಾಗ್4–0–37–0, ಪಿಯೂಷ್ಚಾವ್ಲಾ 3.1–0–29–1, ಕುಲದೀಪ್ಯಾದವ್4–0–37–1.
ಫಲಿತಾಂಶ: ಮುಂಬೈ ಇಂಡಿಯನ್ಸ್ಗೆ 6 ವಿಕೆಟ್ಗೆಲುವು.
ಪಂದ್ಯಶ್ರೇಷ್ಠ: ರೋಹಿತ್ಶರ್ಮಾ.