ಅಂತರಾಷ್ಟ್ರೀಯ

ಮನೆ ಮುರುಕಿ ಯಾಮಿ..?

Pinterest LinkedIn Tumblr

goutamiಹೌದಂತೆ, ಬಾಲಿವುಡ್ ಬೆಡಗಿ ಯಾಮಿ ಗೌತಂ ಎಂಬ ಸುಂದರಿ ನಿಜಕ್ಕೂ ಮನೆ ಮುರುಕಿಯಂತೆ. ಹಾಗಂತ ನಾನು ಹೇಳ್ತಾ ಇಲ್ಲ… ಬಾಲಿವುಡ್ ಗಲ್ಲಿಗಳಲ್ಲಿ ಇಂಥ ಒಂದು ವದಂತಿ ಹರಿದಾಡುತ್ತಿದೆ.
ಅದೆಷ್ಟು ನಿಜವೋ…ಸುಳ್ಳೋ… ಗೊತ್ತಿಲ್ಲ… ಬಿ ಟೌನ್ ಮಂದಿ ಹೀಗೆ ಹೇಳೋದಕ್ಕೂ ಕಾರಣ ಇದೆಯಂತೆ. ಏನಪ್ಪಾ ಅಂದ್ರೆ, ಪುಲಕಿತ್ ಸಾಮ್ರಾಟ್ ಹಾಗೂ ಶ್ವೇತಾ ರೋಹಿರಾ ಅವರ ಸಂಸಾರವನ್ನು ಹಾಳು ಮಾಡಿದ್ದೇ ಇವಳಂತೆ..
‘ಸನಂರೇ’ ಸಿನಿಮಾದಲ್ಲಿ ಜತೆಯಾಗಿ ನಟಿಸಿದ್ದ ಪುಲಕಿತ್-ಯಾಮಿ ಜೋಡಿ ಅಲ್ಲಿಂದಲೇ ಹತ್ತಿರ ಹತ್ತಿರ ಆಗಿಬಿಟ್ಟರಂತೆ. ಅದು ಎಲ್ಲಿವರೆಗೆ ಅಂದ್ರೆ, ಪುಲಕಿತ್ ತನ್ನ ಹೆಂಡ್ತಿ ಶ್ವೇತಾ ರೋಹಿರಾಗೆ ಸೋಡಾ ಚೀಟಿ ಕೊಟ್ಟು ಯಾಮಿಯ ಹಿಂದೆ ಬೀಳುವವರೆಗಂತೆ. ಈಗ ಹೊಸ ವಿಷಯಾಂದ್ರೆ ಈ ಮನೆ ಮುರುಕಿ ಯಾಮಿ ಹಾಗೂ ಪುಲಕಿತ್ ಇಬ್ಬರೂ ಮುಂಬೈ ಹೊರವಲಯದಲ್ಲೊಂದು ಮನೆಯ ಮಾಡಿ ಅದರಲ್ಲಿ ಒಟ್ಟಿಗೇ ಠಿಕಾಣಿ ಹೂಡಿದ್ದಾರಂತೆ. ಆದರೆ, ಪುಲಕಿತ್ ಹೇಳೋದೇ ಬೇರೆ… ನೋ… ನೋ… ಅದೆಲ್ಲ ಸುಳ್ ಸುದ್ದಿ… ಹಾಗೇನಿಲ್ಲ ಬಿಡಿ…

Write A Comment