ಕನ್ನಡ ವಾರ್ತೆಗಳು

ಬರ ಪರಿಹಾರ ಅಧ್ಯಯನಕ್ಕೆ ಕಾಪುವಿಗೆ ಭೇಟಿ ನೀಡಿದ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ

Pinterest LinkedIn Tumblr

ಉಡುಪಿ: ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಕುಡಿಯುವ ನೀರಿನ ಲಭ್ಯತೆ, ಇದಕ್ಕಾಗಿ ಸರಕಾರ ನಡೆಸುತ್ತಿರುವ ಪ್ರಯತ್ನಗಳು ಮತ್ತು ವಿನಿಯೋಗಿಸಲು ಬಾಕಿ ಇರುವ ಹಣಕಾಸಿನ ಪೂರ್ಣ ವಿವರಗಳನ್ನೊಳಗೊಂಡ ಶ್ವೇತಪತ್ರ ಹೊರಡಿಸುವಂತೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಬರ ಪರಿಹಾರ ಅಧ್ಯಯನಕ್ಕಾಗಿ ಕಾಪು ವಿಧಾನಸಭಾ ಕ್ಷೇತ್ರದ ಕುರ್ಕಾಲು ಗ್ರಾ.ಪಂ. ವ್ಯಾಪ್ತಿಯ ಕುಂಜಾರುಗಿರಿ ಸಮೀಪದ ನಿನ್ನಿಪಾದೆ, ಗಿರಿ ನಗರ ಮತ್ತು ಕಟಪಾಡಿ-ಏಣಗುಡ್ಡೆ ಜೆ.ಎನ್. ನಗರ ಪರಿಸರಕ್ಕೆ ಭೇಟಿ ನೀಡಿ, ಅಲ್ಲಿನ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಸ್ಥಳೀಯರ ಅಹವಾಲು ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

K.S (2) K.S (4) K.S (1)

ಮೇ 1 ರೊಳ ಗಾಗಿ ಈ ಪ್ರಶ್ನೆಗೆ ಉತ್ತರ ನೀಡದೇ ಹೋದಲ್ಲಿ ಬಳಿಕ ಗ್ರಾಮೀಣಾಭಿವೃದ್ಧಿ ಸಚಿವರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು. ಸಿ‌ಎಂಗಳೇ ಸಮಸ್ಯೆ ಪರಿಶೀಲಿಸಿ ರಾಜ್ಯ ಸರಕಾರ ಅಹಿಂದ ಮಂತ್ರವನ್ನು ಜಪಿ ಸುತ್ತಿದೆ. ಹಿಂದುಳಿದ ವರ್ಗದ ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ ಎನ್ನುತ್ತಿದೆ. ಆದರೆ ಹಿಂದುಳಿದ ವರ್ಗದ  ಜನರೇ ಅಕವಾಗಿರುವ ಕುರ್ಕಾಲು ಮತ್ತು ಕುಂಜಾರು ಗಿರಿ ಪರಿಸರದಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ. ಕುಡಿಯುವ ನೀರಿಗಾಗಿ 1.5 ಕಿ.ಮೀ. ದೂರವನ್ನು ಕ್ರಮಿಸಿ ನೀರು ತರಬೇಕಿದೆ. ಇಂತಹ ಕಷ್ಟದ ಸ್ಥಿತಿಯನ್ನು ಎದುರಿಸುತ್ತಿರುವ ಈ ಪ್ರದೇಶಕ್ಕೆ ಸ್ವತಃ ಮುಖ್ಯಮಂತ್ರಿಗಳೇ ಬಂದು ಪರಿಶೀಲನೆ ನಡೆಸಲಿ ಎಂದು ಆಗ್ರಹಿಸಿದರು.

K.S (3)

ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾ ರ್ಜುನ ಹೆಗ್ಡೆ, ರಾಜ್ಯ ರೈತ ಮೋರ್ಚಾದ ಉಪಾ ಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಮುಖಂಡರಾದ ಸುರೇಶ್ ಪಿ. ಶೆಟ್ಟಿ ಗುರ್ಮೆ, ಕಟಪಾಡಿ ಶಂಕರ ಪೂಜಾರಿ, ಜಿ. ಪಂ. ಸದಸ್ಯರಾದ ಗೀತಾಂಜಲಿ ಸುವರ್ಣ, ದಿನಕರ್ ಕುತ್ಪಾಡಿ, ಶಿಲ್ಪಾ ಜಿ. ಸುವರ್ಣ, ತಾ.ಪಂ. ಸದಸ್ಯ ನಾಗೇಶ್ ಪೂಜಾರಿ, ಕಟಪಾಡಿ ಗ್ರಾ.ಪಂ. ಅಧ್ಯಕ್ಷೆ ಜೂಲಿಯಟ್ ವೀರಾ ಡಿ’ಸೋಜಾ, ಕುರ್ಕಾಲು ಗ್ರಾ.ಪಂ. ಉಪಾಧ್ಯಕ್ಷೆ ಸುದಕ್ಷಿಣೆ, ಕೋಟೆ ಗ್ರಾ.ಪಂ. ಅಧ್ಯಕ್ಷೆ ಕೃತಿಕಾ ರಾವ್, ಉಪಾಧ್ಯಕ್ಷ ಗಣೇಶ್ ಕುಮಾರ್ ಉಪಸ್ಥಿತರಿದ್ದರು.

ಬಳಿಕ ಉಡುಪಿಗೆ ಭೇಟಿ ನೀಡಿದ ಅವರು ಪೇಜಾವರ ಶ್ರೀಗಳನ್ನು ಭೇಟಿ ಮಾಡಿದರು.

Write A Comment