ಮನೋರಂಜನೆ

ಮಗುವಿನ ನಿರೀಕ್ಷೆಯಲ್ಲಿ ಸುರೇಶ್ ರೈನಾ-ಪ್ರಿಯಾಂಕ ದಂಪತಿ!

Pinterest LinkedIn Tumblr

Suresh Raina, Priyanka

ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್ ಮನ್ ಸುರೇಶ್ ರೈನಾ ಶೀಘ್ರದಲ್ಲೇ ತಂದೆಯಾಗಲಿದ್ದಾರೆ. ಕಳೆದ ವರ್ಷ ಪ್ರಿಯಾಂಕ ಚೌಧರಿಯನ್ನು ವರಿಸಿದ್ದ ರೈನಾ ತಾವು ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗುಜರಾತ್ ಲಯನ್ಸ್ ತಂಡದ ನಾಯಕನಾಗಿರುವ ಸುರೇಶ್ ರೈನಾ ಹಾಲೆಂಡ್‌ನಲ್ಲಿರುವ ಪತ್ನಿಯ ಹಾರೈಕೆಗಾಗಿ ನನ್ನ ತಾಯಿ ತೆರಳಿದ್ದು, ಇತ್ತೀಚೆಗಷ್ಟೇ ನಾನು ಹೋಗಿ ಬಂದಿದ್ದೆ. ಐಪಿಎಲ್ ಮುಗಿದ ಬಳಿಕ ಮತ್ತೆ ಹಾಲೆಂಡ್‌ಗೆ ಹೋಗುತ್ತೇನೆ ಎಂದರು.

ಸದ್ಯ ಹಾಲೆಂಡ್ ನಲ್ಲಿ ಪತ್ನಿ ನೆಲೆಸಿದ್ದು ದೆಹಲಿ ಹಾಗೂ ಹಾಲೆಂಡ್ ನಲ್ಲಿ ನನ್ನ ಮನೆಯಿದ್ದು, ಎರಡೂ ಕಡೆ ನನ್ನ ಮಗುವಿಗೆ ಬೇಕಾಗುವ ಬಟ್ಟೆ, ಪ್ರಾಮ್ಸ್, ಪೋಸ್ಟರ್ ಎಲ್ಲವನ್ನೂ ರೆಡಿ ಮಾಡಿದ್ದೇನೆ. ಆಕೆಯ ಹೆರಿಗೆ ಆದ ನಂತರ ಇಬ್ಬರನ್ನೂ ಭಾರತಕ್ಕೆ ಕರೆ ತರಲಿದ್ದೇನೆ ಎಂದು ರೈನಾ ತಿಳಿಸಿದರು.

Write A Comment