ಅಂತರಾಷ್ಟ್ರೀಯ

ದಾಖಲೆಗಳ ತಪಾಸಣೆ: ಒಂದೂವರೆ ಗಂಟೆ ಕಾದ ನಟ ಅಕ್ಷಯ್‌ ಕುಮಾರ್‌

Pinterest LinkedIn Tumblr

akshay-kumar

ಲಂಡನ್‌ (ಪಿಟಿಐ): ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅವರ ಕೆನಡಾ ಪಾಸ್‌ಪೋರ್ಟ್‌ ವಿವರಗಳನ್ನು ಬ್ರಿಟನ್‌ನ ವಲಸೆ ಅಧಿಕಾರಿಗಳು ಪರಿಶೀಲಿಸಲು ವಿಳಂಬ ಮಾಡಿದ್ದರಿಂದ ಅವರು ಇಲ್ಲಿನ ಹೀಥ್ರೊ ವಿಮಾನನಿಲ್ದಾಣದಲ್ಲಿ ಒಂದೂವರೆ ಗಂಟೆ ಕಾಯಬೇಕಾಯಿತು.

ಅಕ್ಷಯ್‌ ಕುಮಾರ್‌ ಅವರು ‘ರುಸ್ತಮ್‌’ ಚಿತ್ರದ ಚಿತ್ರೀಕರಣಕ್ಕಾಗಿ ಮುಂಬೈಯಿಂದ ಲಂಡನ್‌ಗೆ ತೆರಳಿದ್ದರು. ಅಕ್ಷಯ್‌ ಕುಮಾರ್‌ ಕೆನಡಾದ ರಾಷ್ಟ್ರೀಯತೆಯನ್ನು ಸಹ ಹೊಂದಿರುವುದರಿಂದ ದಾಖಲೆಗಳನ್ನು ಪರಿಶೀಲಿಸಲು ಅವರನ್ನು ಒಂದೂವರೆ ಗಂಟೆ ಕಾಲ ಕಾಯಿಸಿದರು.

‘ಅಕ್ಷಯ್‌ ಕುಮಾರ್‌ ಅವರನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದರು ಎನ್ನುವ ಸುದ್ದಿ ಹಬ್ಬಿಸಲಾಗಿದೆ. ಆದರೆ, ಅದು ಸಂಪೂರ್ಣ ಸುಳ್ಳು. ದಾಖಲಾತಿ ಪರಿಶೀಲನೆಯಿಂದ ವಿಳಂಬವಾಗಿದೆ. ವಲಸೆ ಅಧಿಕಾರಿಗಳು ಇದಕ್ಕಾಗಿ ಕ್ಷಮೆ ಕೇಳಿದ್ದಾರೆ. ಅವರು ಬುಧವಾರವೇ ಪ್ರಯಾಣಿಸಿದ್ದಾರೆ’ ಎಂದು ನಟನ ಆಪ್ತರೊಬ್ಬರು ತಿಳಿಸಿದ್ದಾರೆ.

ಕೆನಡಾದ ರಾಷ್ಟ್ರೀಯತೆ ಪಡೆದಿರುವ ಅಕ್ಷಯ್‌ ಕುಮಾರ್‌ ಅವರು 90 ದಿನಗಳ ಕಾಲ ಲಂಡನ್‌ಗೆ ಪ್ರವಾಸ ಅಥವಾ ವ್ಯಾಪಾರ ಉದ್ದೇಶಕ್ಕೆ ತೆರಳಲು ವೀಸಾ ಒದಗಿಸುವ ಅಗತ್ಯವಿರಲಿಲ್ಲ.

Write A Comment