ಕನ್ನಡ ವಾರ್ತೆಗಳು

ಕೊಳೆತ ಸ್ಥಿತಿಯಲ್ಲಿ ಯುವಕನ ಮೃತ ದೇಹ ಪತ್ತೆ : ಕೊಲೆ ಶಂಕೆ..?

Pinterest LinkedIn Tumblr

derlkatte_murder_photo_1

ಮಂಗಳೂರು,ಏ.08: ದೇರಳಕಟ್ಟೆಯ ವಸತಿ ಗೃಹವೊಂದರಲ್ಲಿ ಯುವಕನೊಬ್ಬನ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಯುವಕನನ್ನು ದೇರಳಕಟ್ಟೆಯಲ್ಲಿ ಇಲೆಕ್ಣ್ರೀಷಿಯನ್ ನಾಗಿ ಕೆಲಸ ನಿರ್ವಹಿಸುವ ಸುಳ್ಯದ ಬೆಳ್ಳಾರೆಯ ಕುಶಾಲಪ್ಪ(28) ಎಂದು ಗುರುತಿಸಲಾಗಿದೆ.

derlkatte_murder_photo_2 derlkatte_murder_photo_3

ಯುವಕನ ಕೈಗಳನ್ನು ಹಿಂದಕ್ಕೆ ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಣಾಜೆ ಪೊಲೀಸರು ಸ್ಥಳಕ್ಕೆ ಅಗಮಿಸಿ ತನಿಖೆ ಆರಂಬಿಸಿದ್ದು,

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲಿಸಿದಾಗ ಲಾಡ್ಜ್‌ನ ಕೊಠಡಿಯೊಂದರಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ವೈಯಕ್ತಿಕ ದ್ವೇಷದಿಂದ ದುಷ್ಕರ್ಮಿಗಳು ಕುಶಾಲಪ್ಪ ಅವರನ್ನು ಎರಡು ದಿನಗಳ ಹಿಂದೆಯೇ ಕೊಲೆ ಮಾಡಿ ಹೋಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.

ಲಾಡ್ಜ್‌ನ ಬಾಗಿಲು ಹಾಕಿದ್ದು, ಪೋಲೀಸರು ಒಳ ಹೋಗಿ ನೋಡಿದಾಗ ಕೊಲೆ ಮಾಡಿದ ಕುಶಾಲಪ್ಪರವರ ಮೃತದೇಹ ಕೊಳೆತ ಸ್ಥಿತಿಯಲ್ಲಿತ್ತು. ಮುಖ ಚಿಲ ಹಾಕಿ ಮುಚ್ಚಲಾಗಿತ್ತು. ಕೊಠಡಿಯಲ್ಲಿ ದೊರೆತ ಕೆಲವು ಆಧಾರದಲ್ಲಿ ಬೆಳ್ಳಾರೆ ನಿವಾಸಿ ಕುಶಾಲಪ್ಪರವರ ಮೃತದೇಹ ಎಂದು ಪೊಲೀಸರು ಗುರುತು ಪತ್ತೆ ಹಚ್ಚಿದ್ದಾರೆ.

Write A Comment