ಮನೋರಂಜನೆ

ಎಪ್ರಿಲ್ 30ಕ್ಕೆ ಬಿಪಾಶಾ–ಕರಣ್‌ ಮದುವೆ

Pinterest LinkedIn Tumblr

bipasa

ಮುಂಬೈ (ಪಿಟಿಐ): ಬಾಲಿವುಡ್‌ ನಟಿ ಬಿಪಾಶಾ ಬಸು ಅವರು ಇದೇ ತಿಂಗಳ 30ರಂದು ನಟ ಕರಣ್‌ ಸಿಂಗ್‌ ಗ್ರೋವರ್‌ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ.

‘ಈ ಸುದ್ದಿ ಹಂಚಿಕೊಳ್ಳಲು ನಾವು ಖುಷಿ ಪಡುತ್ತೇವೆ. ನಮ್ಮ ಬಗ್ಗೆ ನಿಮ್ಮ ಆಶೀರ್ವಾದ ಮತ್ತು ಪ್ರೀತಿಗಾಗಿ ಎಷ್ಟು ಧನ್ಯವಾದ ಹೇಳಿದರೂ ಸಾಲದು’ ಎಂದು ಇಬ್ಬರೂ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕರಣ್ ಜತೆ ಸ್ನೇಹ ಬೆಳೆಯುವ ಮುನ್ನ ಬಿಪಾಶಾ ಅವರು ಹರ್ಮನ್ ಬವೇಜಾ ಅವರೊಂದಿಗೆ ಒಡನಾಟದಲ್ಲಿದ್ದರು. 2015ರಲ್ಲಿ ‘ಅಲೋನ್‌’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ ಬಳಿಕ ಬಿಪಾಶಾ ಮತ್ತು ಕರಣ್ ನಡುವೆ ಸ್ನೇಹ ಬೆಳೆದಿತ್ತು. ನಂತರ ಇಬ್ಬರ ಸಂಬಂಧದ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡಿದ್ದವು. ಆದರೆ ಈಗ ಇಬ್ಬರೂ ವಿವಾಹವಾಗುತ್ತಿದಾರೆ.

ಬಿಪಾಶಾಗೆ ಇದು ಮೊದಲನೇ ಮದುವೆ. ಆದರೆ ಕರಣ್ ಈ ಮೊದಲು ಕಿರುತೆರೆ ನಟಿ ಶ್ರದ್ಧಾ ನಿಗಂ ಮತ್ತು ನಂತರ ಜೆನಿಫರ್‌ ವಿಂಗೆಟ್‌ ಅವರನ್ನು ವಿವಾಹವಾಗಿದ್ದರು.

Write A Comment