ರಾಷ್ಟ್ರೀಯ

ಮೇಲ್ಸೇತುವೆ ಕುಸಿತ ದುರ್ದೈವವಲ್ಲ ಇದೊಂದು ಫ್ರಾಡ್ : ನರೇಂದ್ರ ಮೋದಿ

Pinterest LinkedIn Tumblr

modi-newಕೊಲ್ಕೊತಾ: ಕೊಲ್ಕತ್ತಾದಲ್ಲಿ ಸಂಭವಿಸಿದ ಮೇಲ್ಸೇತುವೆ ಕುಸಿತ ದುರ್ದೈವವಲ್ಲ, ಇದೊಂದು “ಫ್ರಾಡ್” ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳ ಡೂವಾರ್ಸ್ ಪ್ರದೇಶದಲ್ಲಿ ಮಾತನಾಡಿದ ಪ್ರಧಾನಿ, ಪಶ್ಷಿಮ ಬಂಗಾಳದಲ್ಲಿ ನಡೆದ ದುರಂತವನ್ನು ಅಡಳಿತ ಪಕ್ಷ ಗಂಭೀರವಾಗಿ ಪರಿಗಣಿಸದೆ ಸೇತುವೆ ನಿರ್ಮಾಣದ ಕಂಪನಿಯನ್ನು ಕ್ಷಮಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ವಿರುದ್ದ ಪ್ರಧಾನಿ ಮೋದಿ ಹರಿಹಾಯ್ದಿದ್ದಾರೆ.
ಈ ದುರ್ಘಟನೆಗೆ ದೇವರು ಕಾರಣರಲ್ಲ, ಬದಲಾಗಿ ಬಂಗಾಳವನ್ನು ಆಳುತ್ತಿರುವ ಸರ್ಕಾರ. ಹೀಗೆಯೇ ಮುಂದುವರಿದರೆ ಇಂದು ಮೇಲ್ಸೇತುವೆ, ನಾಳೆ ಇಡೀಯ ಬಂಗಾಳವೇ ನಾಶವಾಗಬಹುದು ಎಂದು ಮೋದಿ ಎಚ್ಚರಿಸಿದ್ದಾರೆ.
ಮಾರ್ಚ್ 31ರಂದು ಕೊಲ್ಕತ್ತಾದ ಹೃದಯ ಬಾಗದಲ್ಲಿ ಸುಮಾರು 60 ಮಿ. ಉದ್ದ ಮೇಲ್ಸೇತುವೆ ಮುರಿದು ಬಿದ್ದ ಪರಿಣಾಮ ಸುಮಾರ 21 ಮಂದಿ ಸಾವನ್ನಪ್ಪಿದ್ದರು.

Write A Comment