ಅಂತರಾಷ್ಟ್ರೀಯ

ಫ್ರಾನ್ಸ್ ನಲ್ಲಿ ವೇಶ್ಯಾವಾಟಿಕೆ ನಿಷೇಧ

Pinterest LinkedIn Tumblr

SEX-7ಪ್ಯಾರಿಸ್: ತೀವ್ರ ವಿರೋಧದ ನಡುವೆಯೂ ಪ್ಯಾರಿಸ್ ನಲ್ಲಿ ವೇಶ್ಯಾವಾಟಿಕೆ ಹಾಗೂ ಮಾನವ ಕಳ್ಳಸಾಗಾಣಿಕೆಯನ್ನು ಬುಧವಾರ ಫ್ರಾನ್ಸ್ ಸರ್ಕಾರ ನಿಷೇಧಿಸಿದೆ.
ವೇಶ್ಯಾವಾಟಿಕೆಯನ್ನು ನಿಷೇಧಿಸುವ ಕುರಿತು ಶಾಸನ ಸಭೆಯಲ್ಲಿ ಚರ್ಚೆ ನಡೆಯುತ್ತಿದ್ದರೆ, ಸಂಸತ್ತಿನ ಹೊರಗೆ ಸುಮಾರು 60ಕ್ಕೂ ಹೆಚ್ಚು ಲೈಂಗಿಕ ಕಾರ್ಯಕರ್ತರು ‘ಸೆಕ್ಸ್ ವರ್ಕ್ ಈಸ್ ವರ್ಕ್’ ಎಂಬ ಪೊಸ್ಟರ್ ಹಿಡಿದು ವೇಶ್ಯಾವಾಟಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು. ಆದರೂ ಫ್ರಾನ್ಸ್ ಸರ್ಕಾರ ವೇಶ್ಯಾವಾಟಿಕೆ ನಿಷೇಧಿಸುವ ಬಗ್ಗೆ ಒಮ್ಮತ ತೀರ್ಮಾನಕ್ಕೆ ಬಂದು ವೇಶ್ಯಾವಾಟಿಕೆಯನ್ನು ನಡೆಸುವ ಮತ್ತು ಅದನ್ನು ಪ್ರೋತ್ಸಾಹಿಸುವುದು ಎರಡೂ ಕಾನೂನು ಬಾಹಿರ ಎಂದು ಘೋಷಿಸಿದೆ.
ಈವರೆಗೂ ಪ್ಯಾರೀಸ್‌ನಲ್ಲಿ ವೇಶ್ಯಾವಾಟಿಕೆ ಕಾನೂನಿನಡಿಯಲ್ಲಯೇ ಇತ್ತು ಆದರೆ, ಅಪ್ರಾಪ್ತ ವಯಸ್ಕರ ಬಳಕೆ ವೇಶ್ಯಾಗೃಹಗಳ ನಿರ್ಮಾಣ, ದಲ್ಲಾಳಿ ಇದನ್ನೆಲ್ಲ ಕಾನೂನು ಬಾಹಿರ ಎಂದು ಬಹಳ ಹಿಂದಯೇ ಘೋಷಿಸಿತ್ತು.
2003ರಲ್ಲಿ ಕಾನೂನನ್ನು ಬದಲಿಸಿ ರಸ್ತೆ ಬದಿಯಲ್ಲಿ ನಿಂತು ಲೈಂಗಿಕ ಪ್ರಚೋದನೆ ನೀಡುವುದನ್ನು ನಿಷೇಧಿಸಿತ್ತು. ಇದೀಗ ವೇಶ್ಯಾವಾಟಿಕೆಯನ್ನೇ ಸಂಪೂರ್ಣ ನಿಷೇಧಿಸುವತ್ತಾ ಹೆಜ್ಜೆ ಹಾಕಿದೆ. ಇದರಂತೆ ವೇಶ್ಯಾವಾಟಿಕೆ ನಡೆಸಿ ಸಿಕ್ಕಿಬಿದ್ದರೆ, 3750 ಯೂರೂ ಗಳ ವರೆಗೆ ದಂಡ, ದಲ್ಲಾಳಿ ಕೆಲಸ ಮಾಡಿದರೆ 1500 ಯೂರೂಗಳ ದಂಡ ವಿಧಿಸಲಾಗುತ್ತದೆ.
ಈಗ ಬಂದಿರುವ ಹೊಸ ಕಾನೂನಿನಿಂದ ಕಳ್ಳಸಾಗಾಣಿಕೆ ಮತ್ತು ಅಕ್ರಮ ಮಾರಾಟ ಮಾಡುವವರ ವಿರುದ್ದ ಕ್ರಮ ಕೈಗೊಳ್ಳುವುದು ಸುಲಭವಾಗುತ್ತದೆ. ಶೇ. 85ಕ್ಕಿಂತ ಹೆಚ್ಚಿನವರು ಯಾರದ್ದೂ ಕೈವಾಡಕ್ಕೆ ಬಲಿಯಾದವರೇ ಆಗಿರುತ್ತಾರೆ. ಫ್ರಾನ್ಸ್ಗೆ ಬಂದ ಲೈಂಗಿಕ ಕಾರ್ಯಕರ್ತೆಯರ ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಂಡು ಅವರನ್ನು ಬಲವಂತವಾಗಿ ಈ ಕೆಲಸಕ್ಕೆ ದೂಡಲಾಗುತ್ತಿದೆ .ಇಂತವರನ್ನು ರಕ್ಷಿಸುವುದು ಇದರಂದ ಸಾದ್ಯವಾಗುತ್ತದೆ ಎಂದು ಶಾಸಕ ಮೌಡ್ ಒಲಿವಿಯರ್ ಅಭಿಪ್ರಾಯ ಪಟ್ಟರು.

Write A Comment