ರಾಷ್ಟ್ರೀಯ

ಪಿಎಂಕೆ ನಾಯಕನ ಹತ್ಯೆ ಪ್ರಕರಣ, ಜೀವಾವಧಿಯಿಂದ 6 ಮಂದಿ ಖುಲಾಸೆ

Pinterest LinkedIn Tumblr

madras-High-Courtಚೆನ್ನೈ: ಪಿಎಂಕೆ ನಾಯಕ ಸೆಲ್ವರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೆಳ ಹಂತದ ನ್ಯಾಯಾಲಯ 6 ಮಂದಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಮದ್ರಾಸ್ ಹೈಕೋರ್ಟ್ ಊರ್ಜಿತಗೊಳಿಸಿದೆ.

ಗ್ರಾಮದ ಜಾತ್ರೆಯೊಂದಕ್ಕೆ ಹೊರಟಿದ್ದ ಪಿಎಂಕೆ ನಾಯಕರು ಮತ್ತು ಸಮುದಾಯವೊಂದರ ನಾಯಕರ ನಡುವೆ 2013ರಲ್ಲಿ

ವಿಲ್ಲುಪುರಂ ಜಿಲ್ಲೆಯ ಮರಕ್ಕಣಂ ಎಂಬಲ್ಲಿ ಸಂಭವಿಸಿದ್ದ ಘರ್ಷಣೆ ವೇಳೆ ಹಲವು ಬಸ್ ಮತ್ತು ವಾಹನಗಳು ಜಖಂ ಗೊಂಡಿದ್ದವು. ಪಿಎಂಕೆ ನಾಯಕ ಸೆಲ್ವರಾಜ್ ಹತ್ಯೆ ಇದೇ ಸಂದರ್ಭ ನಡೆದಿತ್ತು. ಮಾರಕಾಸ್ತ್ರ ಬಳಸಿ ಸೆಲ್ವರಾಜ್ ಹತ್ಯೆ ಮಾಡಿದ ಆರೋಪದಡಿ 6 ಮಂದಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಫ ನೀಡಿತ್ತು.

ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಮೊರೆ ಹೋಗಿದ್ದ ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಯ್ಚಂದ್ರನ್ ಮತ್ತು ಎಸ್.ನಾಗಮುತ್ತು ಅವರನ್ನು ಒಳಗೊಂಡ ನ್ಯಾಯಪೀಠ ಪ್ರಕರಣವನ್ನು ಖುಲಾಸೆಗೊಳಿಸಿದೆ.

Write A Comment