ಅಂತರಾಷ್ಟ್ರೀಯ

ಉಗ್ರವಾದದ ಮಾಹಿತಿಯ ತಾಲಿಬಾನ್ ಆಪ್ ಕಿತ್ತೋಗೆದ ಗೂಗಲ್!

Pinterest LinkedIn Tumblr

Google-Webಹೌಸ್ಟನ್: ತಾಲಿಬಾನ್ ಉಗ್ರರು ಸಿದ್ಧಪಡಿಸಿದ್ದ ಆಪ್​ಗೆ ಗೂಗಲ್ ತನ್ನ ಆಪ್ ಬಂಢಾರದಿಂದಲೇ ಕೊತ್ತೊಗೆಯುವ ಮೂಲಕ ಉಗ್ರವಾದವನ್ನು ಖಂಡಿಸುವುದಾಗಿ ಸಂದೇಶ ರವಾನೆಮಾಡಿದೆ. ಆಪ್ ಮೂಲಕ ಉಗ್ರ ವಿಚಾರಗಳು ಸಮಾಜಕ್ಕೆ ತಲುಪದಿರಲು ಈ ನಿರ್ಧಾರ ಕೈಗೊಂಡಿರುವುದಾಗಿ ಗೂಗಲ್ ಸಂಸ್ಥೆ ಸ್ಪಷ್ಟಪಡಿಸಿದೆ.

ಶನಿವಾರ ಪ್ಲೇ ಸ್ಟೋರ್ ಮೂಲಕ ‘ಪಾಸ್ಥೋ ಆಫ್ಘನ್ ನ್ಯೂಸ್ – ಅಲೆಮೆರಾ’ ಎಂಬ ಆಪ್ ಸಿದ್ಧಪಡಿಸಿದ್ದ ತಾಲಿಬಾನ್ ಎರಡು ದಿನಗಳ ಹಿಂದೆ ಗೂಗಲ್​ನಲ್ಲಿ ಪ್ರಚಾರ ಕಾರ್ಯಕ್ಕೆ ಇಳಿದಿತ್ತು. ತಾಲಿಬಾನಿಗಳು ತಮ್ಮ ಹಿಂಬಾಲಕರನ್ನು ಹೆಚ್ಚಿಸುವ ದುರುದ್ದೇಶದಿಂದ ಗೂಗಲ್ ಇಂಜಿನ್ನನ್ನೇ ವೇದಿಕೆಯನ್ನಾಗಿಸಿಕೊಂಡಿದ್ದರು.

ಸಮಾಜದ ಸ್ವಾಸ್ಱವನ್ನು ಹಾಳುಗೆಡಹುವ ಸಿದ್ಧಾಂತ, ಧರ್ಮ, ಪ್ರತ್ಯೇಕತೆ, ಲಿಂಗ ತಾರತಮ್ಯ ಇತ್ಯಾದಿ ಪ್ರತಿಪಾದಿಸುವ ವಿಚಾರಗಳುಳ್ಳ ಆಪ್​ಗಳನ್ನು ಸಹಿಸುವುದಿಲ್ಲ ಎಂದು ಗೂಗಲ್ ವಕ್ತಾರ ತಿಳಿಸಿದ್ದಾರೆ.

Write A Comment