ರಾಷ್ಟ್ರೀಯ

ಪ್ರತ್ಯೂಷಾ ಆತ್ಮಹತ್ಯೆ ಪ್ರಕರಣ, ಡಾಲಿ ವಿರುದ್ಧ ಎಫ್​ಐಆರ್

Pinterest LinkedIn Tumblr

Dolly-Webನವದೆಹಲಿ: ಕಿರುತೆರೆ ನಟಿ ಪ್ರತ್ಯೂಷ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಮಾಜಿ ಬಿಗ್ ಬಾಸ್ ಸ್ಪರ್ಧಿ ಡಾಲಿ ಬಿಂದ್ರಾ ವಿರುದ್ಧ ಈಗ ಪ್ರಕರಣ ದಾಖಲಿಸಲಾಗಿದೆ.

ಡಾಲಿ ಬಿಂದ್ರಾ ಹಾಗೂ ಪ್ರತ್ಯೂಷಾ ತಾಯಿ ಮೀರಾ ನಡುವಿನ ಸಂವಾದದ ಆಡಿಯೋ ತುಣುಕು ಹಾಗೂ ಪ್ರತ್ಯೂಷಾರನ್ನು ದಾಖಲು ಮಾಡಿದ ಆಸ್ಪತ್ರೆಯಲ್ಲಿ ಡಾಲಿ ನಡೆದುಕೊಂಡ ರೀತಿಯನ್ನೇ ಆಧರಿಸಿ ವೆಸೋವಾ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ಮಾಡಲಾಗಿದೆ.

ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಪ್ರತ್ಯುಷಾರ ಮೃತ ಶರೀರದ ವಿಡೀಯೋ ಹಾಗೂ ಪೋಟೋ ಕ್ಲಿಕ್ಕಿಸಿ ಶೇರ್ ಮಾಡಿರುವ ಡೋಲಿ ಮನಸ್ಥಿತಿಯ ಕುರಿತು ತೀವ್ರತರವಾದ ವಿರೋಧವ್ಯಕ್ತವಾದ ಹಿನ್ನಲೆ, ಪೋಟೋ ಹಾಗೂ ವಿಡೀಯೋ ಚಿತ್ರಿಸಲು ಅವಕಾಶ ನೀಡಿದ ಕೋಕಿಲಾಬೆನ್ ಆಸ್ಪತ್ರೆಯ ಸಿಬ್ಬಂದಿ ವಿರುದ್ಧವು ಎಫ್​ಐಆರ್ ದಾಖಲಿಸಿಕೊಳ್ಳಲಾಗಿದೆ.

Write A Comment