ಅಂತರಾಷ್ಟ್ರೀಯ

ಒಬಾಮ ವಾರ್ಷಿಕ ಔತಣಕೂಟಕ್ಕೆ ಪ್ರಿಯಾಂಕಾಗೆ ಆಮಂತ್ರಣ !

Pinterest LinkedIn Tumblr

priyanka

ಮುಂಬೈ: ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ವರು ಶ್ವೇತಭವನದಲ್ಲಿ ಏರ್ಪಡಿಸಿರುವ ವಾರ್ಷಿಕ ಔತಣಕೂಟಕ್ಕೆ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಛೋಪ್ರಾಗೆ ಆಹ್ವಾನ ನೀಡಲಾಗಿದೆಯಂತೆ !

ಹೌದು, ಹೀಗಂತ ಸ್ವತಃ ಪ್ರಿಯಾಂಕ ಹೇಳಿದ್ದಾರೆ. ಮುಂದಿನ ತಿಂಗಳು ಒಬಾಮ ಏರ್ಪಡಿಸಿರುವ ವಾರ್ಷಿಕ ಔತಣಕೂಟಕ್ಕೆ ಅಮೆರಿಕಾದ ಶ್ವೇತಭವನದಿಂದ ಪಿಗ್ಗಿಗೆ ಆಮಂತ್ರಣ ಪತ್ರಿಕೆ ಬಂದಿದೆ. ಇದು ಒಬಾಮ ಅವರ ಕೊನೆಯ ಔತಣಕೂಟವಾಗಿದ್ದು, ಇದರಲ್ಲಿ ಹಾಲಿವುಡ್​ನ ಸ್ಟಾರ್ ನಟಿಯರಾದ ಬ್ರಾಡ್ಲಿ ಕೂಪರ್, ಲೂಸಿ ಲಿಯು, ಜೆನ್ ಫಾಂಡಾ ಮತ್ತು ಗ್ಲಾಡಿಸ್ ನೈಟ್ ಸಹ ಪಾಲ್ಗೊಳ್ಳಲಿದ್ದಾರೆ.

ಕಳೆದ ತಿಂಗಳು ನಡೆದ ಆಸ್ಕರ್ ಸಮಾರಂಭದಲ್ಲಿ ಕೂಡ ಪ್ರಿಯಾಂಕ ಕಾಣಿಸಿಕೊಂಡಿದ್ದರು.ಪ್ರಿಯಾಂಕ ಹಾಲಿವುಡ್ ಸಿರಿಯಲ್ ಕ್ವಾಟಿಂಕೊನ ಚಿತ್ರಿಕರಣದಲ್ಲಿ ಬ್ಯೂಸಿ ಆಗಿರುವ ಜತೆಗೆ ಹಾಲಿವುಡ್​ನ ಸಿನಿಮಾ ಚಿತ್ರೀಕರಣವೊಂದರಲ್ಲಿ ತೊಡಗಿದ್ದಾರೆ. ಆದ್ದರಿಂದ ಅವರು ಭಾಗವಹಿಸುತ್ತಾರೋ ಇಲ್ಲವೋ ಎನ್ನುವುದರ ಬಗ್ಗೆ ಖಚಿತತೆ ಇಲ್ಲ.

Write A Comment