
ಕೋಲ್ಕತ: ಪ್ರಸಕ್ತ ಟಿ20 ವಿಶ್ವಕಪ್ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಮುಡಿಗೆ ಏರಿಸಿಕೊಂಡಿರುವ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಇದೀಗ ವಿಶ್ವ ಟಿ20 ಇಲೆವೆನ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಹೌದು, ಐಸಿಸಿ ಜನರಲ್ ಮ್ಯಾನೇಜರ್ ಜೆಫ್ ಅರ್ಲಡೈಸ್ ಮಂಗಳವಾರ ಈ ವಿಚಾರ ತಿಳಿಸಿದ್ದಾರೆ. ಟಿ20ಯಲ್ಲಿ ಅಗ್ರ ಶ್ರೇಯಾಂಕ ಹೊಂದಿರುವ ವಿರಾಟ್ ಟಿ20 ವಿಶ್ವಕಪ್ನಲ್ಲಿ 146.77 ಸ್ಟ್ರೈಕ್ರೇಟ್ನಲ್ಲಿ 273 ರನ್ ಗಳಿಸಿದ್ದರು. ಇದರ ಆಧಾರದ ಮೇಲೆ ವಿರಾಟ್ರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. ಈ ತಂಡದಲ್ಲಿ ಭಾರತದ ವೇಗಿ ಆಶಿಶ್ ನೇಹ್ರಾ ಕೂಡ ಸ್ಥಾನ ಗಳಿಸಿದ್ದಾರೆ. ಇನ್ನುಳಿದಂತೆ ವಿಶ್ವಕಪ್ನ ರನ್ನರ್ ಅಪ್ ಆದ ಇಂಗ್ಲೆಂಡ್ನ ನಾಲ್ಕು ಜನ ಸದಸ್ಯರು, ಚಾಂಪಿಯನ್ ವಿಂಡೀಸ್ನ ಇಬ್ಬರು ಹಾಗೂ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ , ಬಾಂಗ್ಲಾದೇಶದಿಂದ ತಲಾ ಒಬ್ಬರನ್ನು ಆಯ್ಕೆ ಮಾಡಲಾಗಿದೆ. ಹನ್ನೆರಡನೆ ಆಟಗಾರರಾಗಿ ಬಾಂಗ್ಲಾದ ಮುಸ್ತಫಿಜುರ್ ರೆಹಮಾನ್ ಆಯ್ಕೆಯಾಗಿದ್ದಾರೆ.
ಭಾನುವಾರ ನಡೆದ ವಿಶ್ವ ಟಿ20 ಫೈನಲ್ನಲ್ಲಿ ವಿಂಡೀಸ್ ಪುರುಷರು ಹಾಗೂ ಮಹಿಳೆಯರು ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.