ರಾಷ್ಟ್ರೀಯ

ಭಾರತ್ ಮಾತಾಕಿ ಜೈ ಬರೆದರಷ್ಟೇ ಶಾಲೆಗೆ ಪ್ರವೇಶ!

Pinterest LinkedIn Tumblr

bharat-mata

ಅಹಮದಾಬಾದ್: ಗುಜರಾತ್​ನ ನಾಲ್ಕು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲಿಚ್ಛಿಸುವ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರದಲ್ಲಿ ಕಡ್ಡಾಯವಾಗಿ ಭಾರತ್ ಮಾತಾಕಿ ಜೈ ಎಂದು ಬರೆಯಬೇಕು. ಇಲ್ಲವಾದರೆ ನಿಮಗೆ ಪ್ರವೇಶ ಕನಸಾಗಿಯೇ ಉಳಿಯುತ್ತದೆ.

ಹೌದು, ಬಿಜೆಪಿ ಮುಖಂಡರೊಬ್ಬರು ನಡೆಸುತ್ತಿರುವ ರಾಜ್ಯದ ನಾಲ್ಕು ಶಿಕ್ಷಣ ಸಂಸ್ಥೆಗಳಲ್ಲಿ ಈ ವಿನೂತನ ನೀತಿ ಆರಂಭವಾಗಿದೆ. ಹಿಂದುತ್ವದ ಕುರಿತು ದೇಶದಲ್ಲಿ ಆರ್ ಎಸ್ ಎಸ್ ಸೇರಿದಂತೆ ಬಲಪಂಥಿಯ ಸಂಘಟನೆಗಳು ದೇಶದ ಜನತೆಯ ಮೇಲೆ ಒತ್ತಾಯ ಪೂರ್ವಕ ಹಿಂದುತ್ವ ಹೇರುತ್ತಿವೆ ಎಂದು ಎಡ ಪಂಥೀಯರು ಪ್ರತಿಭಟಿಸುತ್ತಿರುವ ವೇಳೆಯಲ್ಲಿಯೇ ಬಿಜೆಪಿ ಮುಖಂಡ ದಿಲೀಪ್ ಸಂಘಾನಿ ಅಧೀನದಲ್ಲಿರುವ ನಾಲ್ಕು ಶಿಕ್ಷಣ ಸಂಸ್ಥೆಗಳಲ್ಲಿ ಈ ಕಟ್ಟಳೆ ಆರಂಭಿಸುವ ಮೂಲಕ ಇದೀಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದಾರೆ.

ಎಂ ವಿ ಪಟೇಲ್ ಕನ್ಯಾ ವಿದ್ಯಾಲಯ, ಟಿ ಪಿ ಮೆಹತಾ ಮತ್ತು ಎಂಟಿ ಗಾಂಧಿ ವಿದ್ಯಾರ್ಥಿನೀಯರ ಹೈ ಸ್ಕೂಲ್, ಪಟೇಲ್ ವಿದ್ಯಾರ್ಥಿ ಆಶ್ರಮ ಹಾಗು ಡಿ ಎಂ ಪಟೇಲ್ ಫಿಸಿಯೋಥೆರಪಿ ಕಾಲೇಜಿನಲ್ಲಿ ಈ ನೀತಿ ಜಾರಿಯಾಗಿದೆ. ಈ ಬಗ್ಗೆ ಸ್ವತಃ ದಿಲೀಪ್ ಸಂಘಾನಿ ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳಲ್ಲಿನ ದೇಶ ವಿರೋಧಿ ಮನಸ್ಥಿತಿಯನ್ನು ಹೋಗಲಾಡಿಸಿ, ರಾಷ್ಟ್ರ ಭಕ್ತಿ ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಈ ನಾಲ್ಕು ಶಿಕ್ಷಣ ಸಂಸ್ಥೆಗಳಲ್ಲಿ ಬರೋಬ್ಬರಿ 5,000 ವಿದ್ಯಾರ್ಥಿಗಳು ಓದುತ್ತಿದ್ದಾರೆ.

Write A Comment