ರಾಷ್ಟ್ರೀಯ

‘ಚುನಾವಣಾ ರಂಗು’ ಮೆತ್ತಿಕೊಂಡ ಕೇರಳದ ರೈಲು ಗಾಡಿಗಳು

Pinterest LinkedIn Tumblr

kerala-webತಿರುವನಂತಪುರ: ಇಡೀ ಕೇರಳ ಚುನಾವಣಾ ರಂಗನ್ನು ಮೆತ್ತಿಕೊಂಡಿರುವಾಗ , ರೈಲುಗಾಡಿಗಳು ಏಕೆ ಅದಕ್ಕೆ ಅಪವಾದ ಆಗಿ ಇರಬೇಕು? ಹೌದು ಈಗ ಕೇರಳದ ರೈಲುಗಾಡಿಗಳೂ ಚುನಾವಣಾ ರಂಗು ಮೆತ್ತಿಕೊಂಡಿವೆ.

ಕೇರಳದ ಚುನಾವಣಾ ಪ್ರಚಾರದ ಬಿರುಸಿನ ಕಾವು ಈಗ ರೈಲುಗಾಡಿಗಳಿಗೂ ತಲುಪಿದೆ.

ಎಡ ಪ್ರಜಾತಾಂತ್ರಿಕ ರಂಗ ಮೈತ್ರಿಕೂಟದ ಪಕ್ಷಗಳು ಒಟ್ಟು ಮೂರು ರೈಲುಗಳಲ್ಲಿ ಚುನಾವಣಾ ಜಾಹಿರಾತು ನೀಡಿದರೆ, ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾತಾಂತ್ರಿಕ ರಂಗದ ಪಕ್ಷಗಳು ಮತ್ತು ಬಿಜೆಪಿ ಪಕ್ಷಗಳು ತಲಾ ಎರಡು ರೈಲುಗಳಲ್ಲಿ ಚುನಾವಣಾ ಜಾಹಿರಾತು ನೀಡಿವೆ.

ಜಾಹಿರಾತು ರೈಲ್ವೇಯ ಮುಖ್ಯ ಆದಾಯ ಮೂಲವಾಗಿದ್ದರೂ ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳ ಜಾಹಿರಾತುಗಳನ್ನು ಅದು ನೀಡುತ್ತಿದೆ. ಒಟ್ಟು ಏಳು ರೈಲುಗಳಲ್ಲಿ ಪ್ರತೀ ರೈಲಿನ ನಾಲ್ಕು ಬೋಗಿಗಳಲ್ಲಿ ಜಾಹಿರಾತು ನೀಡಲಾಗಿದ್ದು ಬೋಗಿಯೊಂದಕ್ಕೆ 48 ಸಾವಿರ ರೂಪಾಯಿಗಳಂತೆ ರೈಲ್ವೆ ಒಟ್ಟು 60ಲಕ್ಷ ರೂ. ಆದಾಯ ಗಳಿಸುವ ಗುರಿಯನ್ನಿಟ್ಟಿದೆ. ಇದಲ್ಲದೇ ರೈಲ್ವೇ ನಿಲ್ದಾಣಗಳಲ್ಲಿ ಪ್ರಕಟಣೆಗಳ ಮೂಲಕವೂ ತಮ್ಮ ಆದಾಯವನ್ನು ವೃದ್ಧಿ ಮಾಡುವ ಆಲೋಚನೆಯನ್ನು ರೈಲ್ವೆ ಇಲಾಖೆ ಹೊಂದಿದೆ.

Write A Comment