ರಾಷ್ಟ್ರೀಯ

ಬಂಗಾಳ, ಅಸ್ಸಾಂನಲ್ಲಿ ಶಾಂತಿಯುತ ಮತದಾನ

Pinterest LinkedIn Tumblr

jkjkjklಕೋಲ್ಕತ್ತ/ಗುವಾಹಟಿ: ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಸೋಮವಾರ ಮೊದಲ ಹಂತದ ವಿಧಾನಸಭಾ ಚುನಾವಣೆಯ ಮತದಾನ ಬಿರುಸಿನಿಂದ ನಡೆಯುತ್ತಿದ್ದು 4 ಗಂಟೆಯ ವೇಳೆಗೆ ಶೇ. 60 ರಷ್ಟು ಮತದಾನವಾಗಿರುವುದಾಗಿ ತಿಳಿದುಬಂದಿದೆ.
ಮೊದಲ ಹಂತದಲ್ಲಿ ಅಸ್ಸಾಂನ 65 ಹಾಗೂ ಪಶ್ಚಿಮ ಬಂಗಾಳದ 18 ಕ್ಷೇತ್ರಗಳಿಗೆ ವಿಧಾನಸಭೆ ಚುನಾವಣೆ ನಡೆಯುತ್ತಿದೆ. 4 ಗಂಟೆಯ ವೇಳೆಗೆ ಪಶ್ಚಿಮ ಬಂಗಾಳದಲ್ಲಿ ಶೇ.63 ರಷ್ಟು ಮತದಾನವಾಗಿದ್ದರೆ, ಅಸ್ಸಾಂನಲ್ಲಿ ಶೇ.51.1ರಷ್ಟು ಮತದಾನವಾಗಿದೆ ಎಂದು ಸ್ಥಳೀಯ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ನಾಗರಿಕರು ಹುರುಪಿನಿಂದ ಮತಚಲಾವಣೆ ಮಾಡುತ್ತಿರುವುದು ಎಲ್ಲಡೆ ಸಾಮಾನ್ಯವಾಗಿತ್ತು ಎಂದು ಸ್ಥಳೀಯ ಸುದ್ದಿ ವಾಹಿನಿಗಳು ತಿಳಿಸಿವೆ.
ಇಲ್ಲಿಯವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಶಾಂತಿಯುತವಾಗಿ ಮತದಾನ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Write A Comment