ಅಂತರಾಷ್ಟ್ರೀಯ

ಇದು ಮಾರ್ಜಾಲ ಸರ್ಕಸ್..!

Pinterest LinkedIn Tumblr

cicuss

ಸರ್ಕಸ್​ಗಳಲ್ಲಿ ಆನೆ, ಸಿಂಹ, ಹುಲಿ, ನಾಯಿ ಮುಂತಾದವುಗಳನ್ನು ಬಳಸಿರುವುದನ್ನು ನೋಡಿರುತ್ತೀರಿ. ಆದರೆ ಬೆಕ್ಕುಗಳ ಸರ್ಕಸ್ ನೋಡಿದ್ದೀರಾ? ಪ್ಯಾರಿಸ್​ನ ಝಿಪ್ಪೋಸ್ ಸರ್ಕಸ್​ನಲ್ಲಿ ಬೆಕ್ಕುಗಳನ್ನು ನೋಡಲೆಂದೇ ಜನರ ದಂಡು ಹರಿದು ಬರುತ್ತದೆ. ಏಳು ತಲೆಮಾರುಗಳಿಂದ ಸರ್ಕಸ್ ಮಾಡುತ್ತ ಬಂದಿರುವ ರೋಸ್ಲಿನ್ ಬೋರಿಸೋವ್ ಮತ್ತು ಕುಟುಂಬದವರು ಬೆಕ್ಕುಗಳಿಗೆ ವಿಶೇಷ ತರಬೇತಿ ನೀಡಿ ಅವುಗಳಿಗಾಗಿಯೇ ಎಕ್ರೋಕ್ಯಾಟ್ಸ್ ತಂಡ ಕಟ್ಟಿದ್ದಾರೆ.

ಬೀದಿಬೆಕ್ಕುಗಳು ಸರ್ಕಸ್ ಮನೆ ಸೇರಿದವು

5 ವರ್ಷಗಳ ಹಿಂದೆ ಫೆಲಿಕ್ಸ್ ಎಂಬ ಬೀದಿ ಬೆಕ್ಕನ್ನು ಮನೆಗೆ ಕರೆತಂದ ರೋಸ್ಲಿನ್ ಮತ್ತು ಕುಟುಂಬದವರು ಅದಕ್ಕೆ ತರಬೇತಿ ನೀಡಲು ಆರಂಭಿಸಿದರು. ಇವರ ತರಬೇತಿಗೆ ಅದು ಉತ್ತಮವಾಗಿ ಸ್ಪಂದಿಸುತ್ತಿತ್ತು. ಹೀಗಾಗಿ ಸರ್ಕಸ್​ನಲ್ಲಿ ಬೆಕ್ಕುಗಳನ್ನು ಬಳಸಲು ನಿರ್ಧರಿಸಿದರು. ಇದೀಗ ರೋಸ್ಲಿನ್ ಅವರ ಝಿಪ್ಪೋಸ್ ಸರ್ಕಸ್ ತಂಡದಲ್ಲಿ 27 ಬೆಕ್ಕುಗಳಿವೆ. ಇವೆಲ್ಲವುಗಳನ್ನು ಪ್ಯಾರಿಸ್​ನಿಂದ 190 ಮೈಲು ದೂರದಲ್ಲಿರುವ ಏಂಜರ್ಸ್ ಎಂಬಲ್ಲಿನ ಬೀದಿಗಳಿಂದ ತಂದಿರುವಂಥದ್ದು ಎಂಬುದು ವಿಶೇಷ.

ಬೆಕ್ಕುಗಳ ತರಬೇತಿಯೇ ಕಷ್ಟ

ರೋಸ್ಲಿನ್ ಪ್ರಕಾರ ಬೆಕ್ಕುಗಳು ಸ್ವತಂತ್ರ ಜೀವಿಗಳು. ಅವುಗಳು ಕೆಲಸ ಮಾಡಲು ಬಯಸುವುದಿಲ್ಲ. ಹೀಗಾಗಿಯೇ ಬೆಕ್ಕುಗಳಿಗೆ ತರಬೇತಿ ನೀಡುವುದು ಕಷ್ಟ. ಒಂದೊಂದು ಬೆಕ್ಕಿಗೆ ತರಬೇತಿ ನೀಡುವುದಕ್ಕೆ 6 ತಿಂಗಳು ಬೇಕಾಗುತ್ತದೆ. ಆದರೆ ಅವುಗಳು ಸರ್ಕಸ್​ಗಳನ್ನು ನೈಸರ್ಗಿಕವಾಗಿಯೇ ಮಾಡುತ್ತವೆ, ಸರಿಯಾದ ಮಾರ್ಗದರ್ಶನವಿದ್ದರೆ ಸಾಕು ಎಂದು ಹೇಳಿದ್ದಾರೆ.

Write A Comment